ವಿಧವೆಯ ಪಾಲಿಗೆ ರಾಕ್ಷಸನಾದ ಅರಕ್ಷಕ

ಮಂಗಳೂರು: ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಆಕೆಗೆ ಅದಾಗಲೇ ಎರಡು ಮದುವೆಯಾಗಿತ್ತು. ಮೊದಲ ಪತಿ ತೀರಿಕೊಂಡಿದ್ದು, ಎರಡನೇ ಪತಿ ವಿಚ್ಛೇದನ ಪಡೆದುಕೊಂಡಿದ್ದ.

ಒಂದು ಮಗುವಿನ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿದ್ದ ವೇಳೆ ಬಾಳು ಕೊಡುವುದಾಗಿ ಬಂದ ಯಮನೂರಪ್ಪ ಎಂಬ ಅರಕ್ಷಕನೊಬ್ಬ ನಂಬಿಸಿ ಕೈ ಕೊಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಒಂಟಿಯಾಗಿ ಜೀವನ ನಡೆಸುತ್ತಿದ್ದ ಈಕೆಗೆ ಪೋಲಿಸ್ ಯಮನೂರಪ್ಪನ ಪರಿಚಯವಾಗಿದ್ದು, ಪರಿಚಯ ಪ್ರೇಮಕ್ಕೆ ತಿರುಗಿದೆ. ಮಾತ್ರವಲ್ಲ ಮದುವೆಯಾಗುವ ತೀರ್ಮಾನಕ್ಕೆ ಬಂದು ಕಳೆದ ಐದು ವರ್ಷಗಳಿಂದ ಲಿವಿಂಗ್ ಟುಗೆದರ್ ಸಂಬಂಧ ಇಟ್ಟುಕೊಂಡು ಹಿತ್ನಾಳ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತಿ-ಪತ್ನಿಯರಂತೆ ಜೀವನ ಸಾಗಿಸುತ್ತಿದ್ದರು.

ಕಳೆದ ಐದು ವರ್ಷಗಳಲ್ಲಿ ಈಕೆ ಮೂರು ಬಾರಿ ಗರ್ಭವತಿಯಾಗಿದ್ದಾಳೆ. ಆದರೆ ಗರ್ಭಪಾತ ಕಾನೂನು ರೀತಿ ಮಾಡುವಂತಿಲ್ಲ ಎನ್ನುವ  ಅರಿವಿರುವ ಪೊಲೀಸಪ್ಪ ಸುಳ್ಳು ಹೇಳಿ ಆಕೆಯ ಮನವೊಲಿಸಿ ಗರ್ಭಪಾತ ಮಾಡಿಸಿದ್ದಾನೆ. ಮತ್ತೆ ಆಕೆ ನಾಲ್ಕನೇ ಬಾರಿ ಗರ್ಭವತಿಯಾದಾಗ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದಾನೆ. ಇದಕ್ಕೆ ಒಪ್ಪದ ಆಕೆ ಮದುವೆಯಾಗುವಂತೆ ಹಠ ಹಿಡಿದಿದ್ದಾಳೆ. ಪೇಚಿಗೆ ಸಿಲುಕಿದ ಯಮನೂರಪ್ಪ ವಿಧವೆಗೆ ಕೈಕೊಟ್ಟು ಜಾಗ ಖಾಲಿ ಮಾಡಿದ್ದಾನೆ. ವಿಧವೆಯ ಪಾಲಿನ ರಕ್ಷಕನಾಗಬೇಕಿದ್ದ ಈ ಅರಕ್ಷಕ ಆಕೆಯ ಪಾಲಿನ ರಾಕ್ಷಸನಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here