ಬಟ್ಟೆ ಮಡಚಲು ಮೂರು ಹಂತದ ಹೊಸ ತಂತ್ರ

ಮಂಗಳೂರು: ಬಟ್ಟೆ ಮಡಚೋದು ಸುಲಭದ ಕೆಲಸವಲ್ಲ. ಗೃಹಿಣಿಯರಿಗೆ ಬಟ್ಟೆ ವಾಶ್ ಮಾಡುವುದರಿಂದ ಹಿಡಿದು ಬಟ್ಟೆ ಮಡಚುವುದು ಒಂದು ಕೆಲಸ. ಮನೆ ಕೆಲಸದ ನಡುವೆ ಈ ಕೆಲಸವನ್ನು ಆಕೆ ಮಾಡಲೇ ಬೇಕಾಗಿದೆ.

ಗೃಹಿಣಿಯರ ಈ ಕೆಲಸವನ್ನು ಸುಲಭಗೊಳಿಸಲು ಸಹಾಯವಾಗಬಲ್ಲ ವಿಡಿಯೋವೊಂದನ್ನು ಮಹೇಂದ್ರ ಗ್ರೂಪ್ ನ ಅಧ್ಯಕ್ಷ ಆನಂದ ಮಹೇಂದ್ರ ಹಂಚಿಕೊಂಡಿದ್ದಾರೆ. ಇದರಲ್ಲಿ ಕೇವಲ ಮೂರು ಹಂತಗಳಲ್ಲಿ ಎಷ್ಟು ಸುಲಭವಾಗಿ ಮತ್ತು ನೀಟಾಗಿ ಬಟ್ಟೆ ಮಡಚಬಹುದೆಂದು ತೋರಿಸಲಾಗಿದೆ. ಬಟ್ಟೆ ಮಡಿಚಲು ಹೊಸ ತಂತ್ರದ ಹುಡುಕಾಟದಲ್ಲಿ ಇರುವವರು ಖಂಡಿತ ಇದರ ವೀಕ್ಷಣೆ ಮಾಡಿರಿ ಮತ್ತು ಟ್ರಿಕ್ ಕಲಿಯಿರಿ.

ಟ್ವಿಟರ್ ನಲ್ಲಿ ಹಂಚಿಕೊಂಡ ನಂತರ ಈ ಕ್ಲಿಪನ್ನು 12.1 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಟ್ವಿಟರ್ ಬಳಕೆದಾರರು ಮಹೀಂದ್ರಾ ಟ್ವಿಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದ್ಭುತ. ಸೃಜನಶೀಲತೆಯು ಲೌಕಿಕ ಚಟುವಟಿಕೆಗಳನ್ನು ವೀಕ್ಷಿಸುವುದು ರೋಮಾಂಚನವನ್ನುಂಟು ಮಾಡುತ್ತದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ಇದನ್ನು ಮಾಡುತ್ತಿರುವವರು ಅನುಭವಿ ಹಾಗೂ ಬಟ್ಟೆ ಕೂಡ ಮೃದುವಾಗಿದೆ. ಆದ್ರೆ ನೋಡಿದಷ್ಟು ಇದು ಮಾಡಲು ಸುಲಭವಲ್ಲವೆಂದು ಬರೆದಿದ್ದಾರೆ. ಇದೊಂದು ಮ್ಯಾಜಿಗ್ ರೀತಿಯಲ್ಲಿ ಕಾಣ್ತಿದೆ ಎಂದು ಇನ್ನೊಬ್ಬರು ಬರೆದ್ರೆ ಮತ್ತೊಬ್ಬರು ನಾನು ಕೂಡ ಪ್ರತಿ ಬಾರಿ ನನ್ನ ಬಟ್ಟೆಯನ್ನು ಹೀಗೆ ಮಡಚುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here