ಮಂಗಳೂರು : ವಾಟ್ಸಪ್ ಮೂಲಕ ಟೆಲಿಗ್ರಾಂ ಆಪ್ ನ ಲಿಂಕ್ ಕಳುಹಿಸಿ ಅದರಲ್ಲಿರುವ ಸವಾಲು ಪೂರ್ಣಗೊಳಿಸಿದರೆ ಹಣ ಗೆಲ್ಲಬಹುದೆಂದು ನಂಬಿಸಿ 8.78 ಲಕ್ಷ ರೂ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರ್ಚ್ 13 ರಿಂದ ಏಪ್ರಿಲ್ 3 ರವರೆಗೆ ಒಟ್ಟು 8.78 ಲಕ್ಷ ಕಟ್ಟಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನೊಂದೆಡೆ ಮರೈನ್ ಇಲಾಖೆಯಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 6.05 ಲಕ್ಷ ರೂ ಪಡೆದು ವಂಚನೆ ಮಾಡಲಾಗಿದೆ. ಈ ಸಂಬಂಧ ನವಮಂಗಳೂರು ಬಂದರು ಟ್ರಸ್ಟ್ ನ ನಿವೃತ್ತ ನೌಕರರೊಬ್ಬರು ಪಣಂಬೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ಮರೈನ್ ಇಲಾಖೆಯಲ್ಲಿ ಪರಿಚಯದವರಿದ್ದಾರೆ, ಅವರ ಮೂಲಕ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ, ಹಣ ಪಡೆದಿದ್ದ ವ್ಯಕ್ತಿ ಬಳಿಕ ಕೆಲಸವನ್ನು ಕೊಡಿಸದೆ, ಹಣವನ್ನು ಮರಳಿಸದೆ ವಂಚಿಸಿದ್ದಾನೆ ಎಂದು ದೂರುದಾರ ಹೊನ್ನಕಟ್ಟೆ ನಿವಾಸಿ ಆರ್ ಎಂ ಕೋರಿ ದೂರಿನಲ್ಲಿ ತಿಳಿಸಿದ್ದಾರೆ.