ಮಂಗಳೂರು : ಸುಳ್ಯ ಪುತ್ತೂರಿನ ಗಡಿ ಭಾಗವಾದ ಅಡೂರಿನಲ್ಲಿ ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಎಪ್ರಿಲ್ 11ರಂದು ನಡೆದಿದೆ. ಮಕ್ಕಳು ನೀರಲ್ಲಿ ಮುಳುಗಿರುವ ವಿಷಯ ತಿಳಿಯುತ್ತಲೇ ಸ್ಥಳೀಯರು ಬಂದು ಮಕ್ಕಳನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಅದಾಗಲೇ ಇಬ್ಬರ ಪ್ರಾಣ ಪಕ್ಷಿಯು ಹಾರಿ ಹೋಗಿತ್ತು. ಏಳು ಮತ್ತು ಒಂಬತ್ತು ವರ್ಷದ ಈ ಮಕ್ಕಳಿಬ್ಬರು ಮನೆಯವರಿಗೆ ತಿಳಿಸದೆ ಹೊಳೆಯಲ್ಲಿ ಈಜಲು ಬಂದಿದ್ದರು ಎನ್ನಲಾಗಿದೆ. ಮೃತ ಮಕ್ಕಳನ್ನು ಮೊಹಮ್ಮದ್ ಆಶಿಕ್ (7) ಮತ್ತು ಮೊಹಮ್ಮದ್ ಫಾಸಿಲ್ (9)ಎಂದು ಗುರುತಿಸಲಾಗಿದೆ.