ಹೊಸ ಕಾರನ್ನು ಎಳೆದೊಯ್ದ ಕತ್ತೆ – ಜನರಿಂದ ವಿಭಿನ್ನ ಪ್ರತಿಕ್ರಿಯೆ

    ಮಂಗಳೂರು (ಉದಯ್‌ಪುರ): ಕಾರು ಖರೀದಿಸಿದ ಕೆಲವೇ ತಿಂಗಳಲ್ಲಿ ಪದೇ ಪದೇ ರಿಪೇರಿಗೆ ಬರುತ್ತಿದ್ದ ಕಾರನ್ನು ಶೋರೂಮ್‌ ಗೆ ಕೊಂಡೊಯ್ದು ಸಿಬ್ಬಂದಿಗೆ ತೋರಿಸಿದರೂ ಹೆಚ್ಚಿನ ಪ್ರಯೋಜನವಾಗದ ಕಾರಣ ಬೇಸತ್ತ ಉದಯ್‌ಪುರದ ಕಾರು ಮಾಲೀಕನೊಬ್ಬ ತನ್ನ ಕಾರನ್ನು ಕತ್ತೆಗೆ ಬಿಗಿದು ವಿಪರೀತ ಬಿಸಿಲು ಹಾಗೂ ಸಂಚಾರ ದಟ್ಟಣೆಯ ನಡುವೆ ಶೋರೂಮ್‌ ಬಳಿಗೆ ಕೊಂಡೊಯ್ದಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಡ್ರಮ್ ಬಾರಿಸುತ್ತಾ, ತನ್ನ ಕಾರನ್ನು ಕತ್ತೆಗೆ ಬಿಗಿದು ಎಳೆಸಿದ ವ್ಯಕ್ತಿಯನ್ನು ಉದಯ್‌ಪುರ ನಿವಾಸಿಯಾದ ರಾಜ್‌ಕುಮಾರ್ ಗಾಯತ್ರಿ ಎಂದು ಗುರುತಿಸಲಾಗಿದೆ. ಪ್ರಾಣಿಗಳ ಬಗ್ಗೆ ಇಂತಹ ಅಸೂಕ್ಷ್ಮ ನಡವಳಿಕೆ ತೋರಿರುವ ರಾಜ್‌ಕುಮಾರ್ ಗಾಯತ್ರಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಈ ಪೈಕಿ ಕೆಲವರು ಈ ಕೃತ್ಯವನ್ನು ಪ್ರಾಣಿ ಹಿಂಸೆ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು ಕಾರು ಸಾಗಿಸಲು ಕ್ರೇನ್ ಬಳಸದ ಕಾರು ಮಾಲಕನನ್ನೇ ಕತ್ತೆ ಎಂದು ಜರಿದಿದ್ದಾರೆ.

    ರಾಜ್‌ಕುಮಾರ್ ಚಿಕ್ಕಪ್ಪ ಶಂಕರ್‌ಲಾಲ್ ಅವರು ಮಾದ್ರಿ ಕೈಗಾರಿಕಾ ಪ್ರದೇಶದಿಂದ ರೂ. 17 ಲಕ್ಷ ಮೌಲ್ಯದ ನೂತನ ಕಾರು ಖರೀದಿಸಿದ್ದರು. ಆದರೆ, ಕಾರು ಪದೇ ಪದೇ ರಿಪೇರಿಗೊಳಗಾಗುತ್ತಿದ್ದು, ಅದನ್ನು ಚಾಲೂ ಮಾಡಲು ಅನೇಕ ಬಾರಿ ತಳ್ಳಬೇಕಾಗುತ್ತಿತ್ತು. ಕಾರು ಮಾರಾಟ ಸಂಸ್ಥೆಯ ಪ್ರತಿನಿಧಿಯೊಬ್ಬರ ಸಲಹೆಯಂತೆ ಬ್ಯಾಟರಿಯನ್ನು ಚಾರ್ಜ್ ಮಾಡಲು ಸ್ವಲ್ಪ ದೂರ ಕಾರು ಓಡಿಸುವ ಪ್ರಯತ್ನವೂ ವಿಫಲಗೊಂಡಿದೆ. ಕೊನೆಗೆ ಕಾರು ಬದಲಾಯಿಸಿಕೊಡುವಂತೆ ಒತ್ತಾಯಿಸಿದ್ದು, ಕಾರನ್ನು ಶೋರೂಮ್‌ಗೆ ಕತ್ತೆ ಮೂಲಕ ಎಳೆದು ಸಾಗಿಸಿ ಶೋರೂಮ್‌ ನವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

    ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

    LEAVE A REPLY

    Please enter your comment!
    Please enter your name here