500 ವರ್ಷ ಪುರಾತನ “ಭಜರಂಗಿ” ಪ್ರತಿಮೆ ಭಾರತಕ್ಕೆ

ಮಂಗಳೂರು: ಸುಮಾರು 500 ವರ್ಷಗಳಷ್ಟು ಪುರಾತನ ಹನುಮಾನ್ ವಿಗ್ರಹವನ್ನು ಆಸ್ಟ್ರೇಲಿಯಾ ಭಾರತಕ್ಕೆ ಹಿಂದಿರುಗಿಸಿದೆ.

ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ. ಕೇಂದ್ರ ಸಂಸ್ಕೃತಿ ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ  ಟ್ವೀಟ್ ಮಾಡಿದ್ದು, ವಿದೇಶದಲ್ಲಿರುವ ದೇಶದ ಎಲ್ಲಾ ಅಮೂಲ್ಯ ವಸ್ತುಗಳನ್ನು ಮರಳಿ ತರಲು ಭಾರತ ಸರಕಾರ ಕೆಲಸ ಮಾಡುತ್ತಿದೆ ಎಂದು ಹೇಳುದ್ದಾರೆ. 14/15ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ವಿಷ್ಣು ದೇವಾಲಯದಿಂದ ಹನುಮಂತನ ವಿಗ್ರಹವನ್ನು ಕಳವು ಮಾಡಲಾಗಿತ್ತು ಎಂದು ಅವರು ಹೇಳುದ್ದಾರೆ.

 

LEAVE A REPLY

Please enter your comment!
Please enter your name here