ಪ್ರಾಣಿ ಪ್ರಪಂಚ-1 

ಮಕ್ಕಳಿಗಾಗಿ ವಿಶೇಷ ಮಾಹಿತಿ

ಕಾಡು ಕತ್ತೆ (Equus hemionus khur):

ಭಾರತೀಯ ಕಾಡು ಕತ್ತೆಯು ಏಷ್ಯಾದ ಕಾಡು ಕತ್ತೆಯ ಉಪತಳಿಗೆ ಸೇರಿದೆ. ಈ ಕಾಡು ಕತ್ತೆಯ ಕುತ್ತಿಗೆಯಿಂದ ತಲೆಯ ಹಿಂಬದಿಯವರೆಗೆ ದಟ್ಟವಾದ ಕೂದಲು ಆವರಿಸಿದೆ. ಕೂದಲಿನ ಒಳಗೆ ಕಂದು ಬಣ್ಣದ ಪಟ್ಟಿಗಳಿದ್ದು ಬಾಲದವರೆಗೆ ಹಬ್ಬಿದೆ. ಮೊದಲು ಪಶ್ಚಿಮ ಭಾರತ, ದಕ್ಷಿಣ ಪಾಕಿಸ್ತಾನ, ಅಪಘಾನಿಸ್ತಾನ, ಇರಾನ್ ಗಳಲ್ಲಿ ಹರಡಿದ್ದ ಈ ಪ್ರಾಣಿಗಳು ಇಂದು ಗುಜರಾತ್ ನ ಕಚ್, ಸುರೇಂದ್ರ ನಗರ, ಬನಸ್ಕಾಂತ, ಮೆಹೆಸಾನ ಜಿಲ್ಲೆಗಳಲ್ಲಿ ಮಾತ್ರ ಕಂಡು ಬರುತ್ತದೆ. ಬೆಳಗಿನ ನಸು ಬೆಳಕಿನಲ್ಲಿ ಹಾಗೂ ಸಂಜೆಯ ಮಬ್ಬು ಕತ್ತಲಿನಲ್ಲಿ ಹುಲ್ಲುಗಾವಲಿನಲ್ಲಿ ಆಹಾರಕ್ಕಾಗಿ ಅಲೆಯುತ್ತದೆ. ಈ ಪ್ರಾಣಿಗಳ ಆಹಾರವು ಹುಲ್ಲು ಎಲೆಗಳು ಹಣ್ಣುಗಳು ಬೆಳೆದ ಪೈರು ಮುಂತಾದವುಗಳು. ವೇಗವಾಗಿ ಓಡುವ ಭಾರತೀಯ ಪ್ರಾಣಿಗಳಲ್ಲಿ ಈ ಕತ್ತೆಗಳು ಮೊದಲ ಸ್ಥಾನದಲ್ಲಿವೆ. ಮಳೆಗಾಲವು ಇವುಗಳ ಗರ್ಭಧಾರಣೆಯ ಸಮಯವಾಗಿದೆ. ಮೊದಲಿನಿಂದಲೂ ಅರಸರು ನವಾಬರು ಇವುಗಳ ಬೇಟೆಯಲ್ಲಿ ತೊಡಗಿದ್ದು, 60ರ ದಶಕದಲ್ಲಿ ಬಂದ ರೋಗಗಳಿಂದಾಗಿ ಕಾಡು ಕತ್ತೆಗಳ ಸಂಖ್ಯೆಯು ಕ್ಷೀಣಿಸಿದೆ.

LEAVE A REPLY

Please enter your comment!
Please enter your name here