ಮಕ್ಕಳಿಗಾಗಿ ವಿಶೇಷ ಮಾಹಿತಿ
ಏಷ್ಯಾದ ಕಪ್ಪು ಕರಡಿ (Ursus thibetanus)
ಈ ಕರಡಿಗೆ ಶಶಿವರ್ಣದ ಕರಡಿ ಅಥವಾ ಬಿಳಿ ಎದೆಯ ಕರಡಿ ಎಂದೂ ಕರೆಯುತ್ತಾರೆ. ಇದು ಮಧ್ಯಮ ಗಾತ್ರದ ಜಾತಿಗೆ ಸೇರಿದ್ದು ̧ ಭಾರತೀಯ ಉಪಖಂಡದ ಉತ್ತರ ಭಾಗದಲ್ಲಿ ಹೆಚ್ಚಾಗಿ ಹಿಮಾಲಯದ ತಪ್ಪಲಿನಲ್ಲಿ, ಕೊರಿಯಾ , ಚೀನಾದ ಉತ್ತರ ಭಾಗ , ರಷ್ಯಾದ ಪೂರ್ವ ಭಾಗ, ಜಪಾನಿನ ಕೆಲವೆಡೆಗಳಲ್ಲಿ ಕಂಡು ಬರುತ್ತದೆ.
ಏಷ್ಯಾದ ಈ ಮಾದರಿಯ ಕರಡಿ ಮಾನವರ ಮೇಲೆ ಪ್ರತಿಬಾರಿ ಹಲ್ಲೆ ಮಾಡುವ ಅಕ್ರಮಣಕಾರಿ ಪ್ರಾಣಿಯಾಗಿದೆ.
ಕರಡಿ ಕತ್ತಿನಲ್ಲಿ ಇಂಗ್ಲಿಷ್ ಆಕಾರದ ಬಿಳಿಯ ಪಟ್ಟಿ ಇದೆ. ಈ ಕರಡಿಗಳು ಮರವನ್ನು ಏರುತ್ತವೆ. ಅದಕ್ಕೆ ಬೇಕಾದ ಬಲಿಷ್ಠವಾದ ದೇಹದ ಮೇಲ್ಭಾಗವಿದೆ. ಈ ಕರಡಿಗಳಿಗೆ ದೊಡ್ಡದಾದ ಕಿವಿಗಳಿದ್ದು , ಇವು ಸಾಮಾನ್ಯವಾಗಿ ಗುಂಪಿನಲ್ಲಿ ವಾಸಿಸುತ್ತದೆ. ಮರಗಳನ್ನಲ್ಲದೆ ದೊಡ್ಡ ಬಂಡೆಗಳನ್ನು ಇವು ಏರುತ್ತವೆ. ಇವುಗಳ ಆಹಾರವು ಸಾಮಾನ್ಯವಾಗಿ ಕೀಟಗಳು, ಜೀರುಂಡೆ ತತ್ತಿ, ಗೆದ್ದಲು ಹುಳ, ಕಂಬಳಿ ಹುಳ, ಕೊಳೆತ ಮಾಂಸ, ದುಂಬಿ, ಮೊಟ್ಟೆ, ಅಣಬೆ, ಹುಲ್ಲು, ಹಣ್ಣು, ಬೀಜಗಳು, ಜೇನುತುಪ್ಪ, ಧಾನ್ಯಗಳು ಇತ್ಯಾದಿ.