ತಮಿಳುನಾಡಿನ ಮಧುರೈ ಬೀದಿಯಲ್ಲಿ ತಮಿಳು ನಟ ಮೋಹನ್ ಮೃತ ದೇಹ ಪತ್ತೆ

ಮಂಗಳೂರು( ಮಧುರೈ ): 1980 ಮತ್ತು 1990ರ ದಶಕದ ಚಲನಚಿತ್ರಗಳಲ್ಲಿ ತಮ್ಮ ಹಾಸ್ಯ ಪೋಷಕ ನಟ ಪಾತ್ರಗಳಿಂದ ಖ್ಯಾತರಾಗಿದ್ದ ತಮಿಳು ನಟ ಮೋಹನ್ ಮೃತಪಟ್ಟಿದ್ದಾರೆ. ಮೋಹನ್ ಅವರ ಮೃತ ದೇಹವು ತಮಿಳುನಾಡಿನ ಮದುರೈ ನಲ್ಲಿನ ತಿರುಪರಂಕುಂದ್ರಂ ಪ್ರದೇಶದಲ್ಲಿ ಪತ್ತೆಯಾಗಿದೆ.
60 ವರ್ಷದ ನಟ ಮೋಹನ್ ಕೆಲಸವಿಲ್ಲದೆ ತೀವ್ರ ಬಡತನಕ್ಕೆ ತುತ್ತಾಗಿದ್ದರು. ಹತ್ತು ವರ್ಷಗಳ ಹಿಂದೆ ಪತ್ನಿ ನಿಧನರಾಗಿದ್ದು ಮೋಹನ್ ಭಿಕ್ಷೆ ಬೇಡಿ ಬದುಕು ನಡೆಸುತ್ತಿದ್ದರು.


1989ರಲ್ಲಿ ಬಿಡುಗಡೆಯಾಗಿದ್ದ ಕಮಲ್ ಹಾಸನ್ ನಾಯಕತ್ವದ ಅಪೂರ್ವ ಸಹೋದರಗಳ್ ಚಿತ್ರದಲ್ಲಿ ಮೋಹನ್ ಅವರು ಕಮಲ ಹಾಸನ್ ಅವರ ಆಪ್ತ ಗೆಳೆಯ ಅಪ್ಪು ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಅದಿಷ್ಯ ಮನಿರ್ಗಳ್, ನಾನ್ ಕಡವುಳ್ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇದಾದ ನಂತರ ತಮಗೆ ನಟಿಸಲು ಯಾವುದೇ ಅವಕಾಶ ದೊರೆಯದೆ ಹೋದ ಕಾರಣ ಮದುರೈನ ರಥ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು. ಜುಲೈ 31ರಂದು ಅವರು ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಟಮೋಹನ್ ಗುರುತು ಸಿಗದಷ್ಟು ಕೊಳಕಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೂ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here