ಗಾಂಧಿ – ಸಂಕ್ಷಿಪ್ತ ಜೀವನ ಕಥನ – 28

ಗಾಂಧೀಜಿ ಕೊಲೆ

ಸಂಕುಚಿತ ಮನೋಭಾವ ಹಿಂದೂರಾಷ್ಟ್ರ-ವಾದಿಗಳು ಗಾಂಧಿಯವರನ್ನು ಕೊಲ್ಲಲು ನಾಲ್ಕು ಬಾರಿ ಪ್ರಯತ್ನಿಸಿ ವಿಫಲವಾಗಿದ್ದರು. ಮೊದಲನೆ ಪ್ರಯತ್ನವು ಹಿಂದೆ ಪೇಶ್ವೆಗಳ ರಾಜಧಾನಿಯಾಗಿದ್ದ ಪುಣೆಯಲ್ಲಿ 1934ರಲ್ಲಿ ನಡೆದಿತ್ತು. ಗಾಂಧಿಯ ಕೊಲೆಗಾಗಿ ತವಕಿಸುತ್ತದ್ದ್ ನಾಥುರಾಂ ಗೋಡ್ಸೆ ಮಹಾರಾಷ್ಟ್ರ ಮೂಲದ ಚಿತ್‌ ಪಾವನ ಬ್ರಾಹ್ಮಣ ಸಮುದಾಯದವನು. ಅವನು ಹಿಂದೂರಾಷ್ಟ್ರ-ವಾದಿಯಾಗಿದ್ದು ಗಾಂಧೀಯ ಮೇಲೆ ಎರಡು ಬಾರಿ ಕಠಾರಿ ಹಿಡಿದು ಆಕ್ರಮಣ ಮಾಡಿದ್ದ. ಗಾಂಧಿಯವರ ಮೇಲೆ ಬಾಂಬ್‌ ಎಸೆದು ಕೊಲ್ಲುವ ವಿಫಲ ಪ್ರಯತ್ನವೂ ನಡೆದಿತ್ತು. ನಾಲ್ಕನೆಯ ಬಾರಿ ಈ ದುಷ್ಟ ಪ್ರಯತ್ನಕ್ಕೆ ಗೆಲುವು ಸಿಕ್ಕಿತು. 1948 ಜನವರಿ 30 ಗಾಂಧಿ ದೆಹಲಿಯ ಬಿರ್ಲಾ ಭವನದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆಗೆಂದು ಬಂದರು. ಕೊಲೆಹಡುಕ ಗೋಡ್ಸೆ ಗಾಂಧಿಯ ಪಾದಗಳಿಗೆ ನಮಸ್ಕರಿಸುವಂತೆ ನಟಿಸಿದ. ಕ್ಷಣಮಾತ್ರದಲ್ಲಿ ಸೆಟೆದು ನಿಂತು ಅವರ ಎದೆಗೆ ಪಿಸ್ತೂಲಿನಿಂದ ಮೂರು ಗುಂಡುಗಳನ್ನು ಹಾರಿಸಿದ. ಈ ಪಿತೂರಿಗೆ ಗಾಂಧಿ ಬಲಿಯಾದರು.

ಕೊಲೆಗಾರ ನಾಥುರಾಂ ಗೋಡ್ಸೆ

ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧದ ಹೋರಾಟಕ್ಕೆ ಮನುಕುಲಕ್ಕೆ ಹೊಸದೃಷ್ಟಿಯನ್ನು ನೀಡಿ ಜಗದೆತ್ತರಕೆ ಬೆಳೆದ ಮಹಾತ್ಮ ಗಾಂಧಿ ರಕ್ತಸಿಕ್ತರಾಗಿ ನೆಲಕ್ಕುರುಳಿದರು.

ನೆಹರೂ ಹೇಳಿದರು: “ನಮ್ಮೆಲ್ಲರ ಬದುಕಿನ ದೀಪ ಹಾರಿಹೋಯಿತು”

LEAVE A REPLY

Please enter your comment!
Please enter your name here