ಮಂಗಳೂರು (ವಾಷಿಂಗ್ಟನ್): ವಿಶ್ವದಲ್ಲೇ 2ನೇ ಬಾರಿಗೆ ಪ್ರಾಯೋಗಿಕವಾಗಿ ಹಂದಿಯ ಹೃದಯದ ಕಸಿಗೊಳಗಾಗಿದ್ದ ಅಮೆರಿಕದ ಲಾರೆನ್ಸ್ ಫೌಸೆಟ್ (58) ಶಸ್ತ್ರ ಚಿಕಿತ್ಸೆಗೊಳಗಾದ 40 ದಿನಗಳ ಬಳಿಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಸೆ.20ರಂದು ಹೃದಯಾಘಾತದಿಂದ ಸಾಯುವ ಹಂತಕ್ಕೆ ತಲುಪಿದ್ದ ಫೌಸೆಟ್’ಗೆ ಕೊನೆಯ ಆಯ್ಕೆಯಾಗಿ ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು. ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಫೌಸೆಟ್‌ಗೆ ಹೃದಯ ಕಸಿ ಮಾಡಿದ ಬಳಿಕ 45 ದಿನಗಳವರೆಗೆ ಆರೋಗ್ಯವಾಗಿದ್ದರು.
ನಂತರದ ದಿನಗಳಲ್ಲಿ ಹೃದಯ ಸರಿಯಾಗಿ ಸ್ಪಂದಿಸದ ಲಕ್ಷಣಗಳು ಕಾಣಲಾರಂಭಿಸಿದೆ. ಶಸ್ತ್ರಚಿಕಿತ್ಸೆಯ ನಂತರ ಸುಮಾರು 6 ವಾರಗಳ ಕಾಲ ಬದುಕಿದ್ದ ಫೌಸೆಟ್ ಅ.30ರಂದು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.