ಪೊಲೀಸ್ ಆಯುಕ್ತರಾದ ಮಾಜಿ ಶಾಸಕ – ಲುಡೋ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಮೊಯ್ದಿನ್ ಬಾವಾ 

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಒಂದು ದಿನಕ್ಕೆ ಪೊಲೀಸ್ ಆಯುಕ್ತರಾಗಿದ್ದು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಈ ಚಿತ್ರ ನೋಡಿ ನೀವು ಅಂದ್ಕೊಂಡಿದ್ರೆ ಅದು ತಪ್ಪು. ಹಾಗಂತ ಹಿರಿಯ ಪೊಲೀಸ್‌ ಅಧಿಕಾರಿಯ ಚೈರಲ್ಲಿ ಕೂತು ಏಡವಟ್ಟು ಮಾಡಿಕೊಂಡಾರೇನು ಅಂತ ಅಂದುಕೊಂಡ್ರೆ ಅದೂ ತಪ್ಪು. ಹಾಗಾದ್ರೆ ನಿಜ ಏನೂಂತ ಯೋಚನೆ ಮಾಡ್ತ ಇದ್ರೆ ಮುಂದೆ ಓದಿ.

ಲೋಕಸಭಾ ಚುನಾವಣೆ ಬಳಿಕ ರಾಜಕೀಯ ಕೆಲಸಗಳಿಂದ ಒಂದಿಷ್ಟು ಫ್ರೀಯಾಗಿರುವ ಬಾವಾ ಬಣ್ಣ ಹಚ್ಚುವ ಮೂಲಕ ಸಿನೆಮಾದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಡಿ. ಯೋಗರಾಜ್‌ ನಿರ್ದೇಶನದ ಲುಡೋ ಚಿತ್ರಕ್ಕಾಗಿ ಮಾಜಿ ಶಾಸಕರು ಬಣ್ಣ ಹಚ್ಚಿದ್ದು ಚಿತ್ರದಲ್ಲಿ ಪೊಲೀಸ್‌ ಆಯುಕ್ತರಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಚಿತ್ರಗಳನ್ನು ಗಮನಿಸಿ ಬಾವಾ ಅವರನ್ನು ಸಂಪರ್ಕಿಸಿದಾಗ ಸಿನಿಮಾದಲ್ಲಿ ನಟಿಸುವ ವಿಚಾರವನ್ನು ಬಿಚ್ಚಿಟ್ಟರು. ಕಳೆದ ಕೆಲವು ದಿನಗಳಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here