ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ – ಶ್ರೀನಗರದಲ್ಲಿ ಪ್ರಧಾನಿಯಿಂದ ಯೋಗ ದಿನಾಚರಣೆ –  ಯೋಗ ಕೇವಲ ಜ್ಞಾನವಲ್ಲ, ವಿಜ್ಞಾನವೂ ಹೌದು: ಮೋದಿ

ಮಂಗಳೂರು/ಶ್ರೀನಗರ:  ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಯೋಗವು ಜ್ಞಾನ ಮಾತ್ರವಲ್ಲ ವಿಜ್ಞಾನವು ಕೂಡ ಆಗಿದೆ, ಇಂದು ಮಾಹಿತಿ ಸಂಪನ್ಮೂಲಗಳ ಪ್ರವಾಹವೇ ಇದೆ ಅಂತಹ ಪರಿಸ್ಥಿತಿಯಲ್ಲಿ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ, ಇದರ ಪರಿಹಾರವು ಯೋಗದಲ್ಲಿದೆ ಎಂದು ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನಲೆಯಲ್ಲಿ ಇಂದು ಶ್ರೀನಗರದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಯೋಗದ ಪ್ರಯಾಣ ಮುಂದುವರೆಯುತ್ತಿದೆ, ಇಂದು ಜಗತ್ತಿನಲ್ಲಿ ಯೋಗ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಕಳೆದ ವರ್ಷ 130ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಅಮೆರಿಕದ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆ ಮುನ್ನಡೆಸಲು ನನಗೆ ಅವಕಾಶ ಸಿಕ್ಕಿತು. ಯೋಗಾಸನದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ, ಯೋಗ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಯೋಗಾಭ್ಯಾಸದಿಂದ ಅನೇಕ ರೋಗಗಳಿಗೆ ಮುಕ್ತಿ ಸಿಗಲಿದೆ, ರೋಗಗಳು ಗುಣಮುಖವಾಗುವ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಹೇಳಿದರು. ಆರೋಗ್ಯ ರಕ್ಷಣೆ, ಸಮಾಜ ಸ್ವಾಸ್ಥ್ಯ ಕಾಪಾಡಲು ಯೋಗ ಅತ್ಯಗತ್ಯ, ಯೋಗ ದಿನನಿತ್ಯದ ಜೀವನಕ್ಕೆ ಸಹಾಯಕವಾಗಲಿದೆ ಎಂದರು. ಪ್ರಪಂಚದ ಎಲ್ಲಾ ಹಿರಿಯ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ನನ್ನೊಂದಿಗೆ ಯೋಗದ ಬಗ್ಗೆ ಚರ್ಚಿಸುತ್ತಾರೆ. ಇದು ಪ್ರಪಂಚದ ಜನರ ದೈನಂದಿನ ಜೀವನದ ಭಾಗವಾಗುತ್ತಿದೆ. ಸೌದಿ ಅರೇಬಿಯಾ ಇದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಿದೆ. ಜರ್ಮನಿಯಲ್ಲಿ 1.5 ಕೋಟಿ ಜನರು ಯೋಗಾಭ್ಯಾಸವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಬೆಳಗ್ಗೆ 6.30ಕ್ಕೆ ಆರಂಭವಾಗಬೇಕಿದ್ದ ಯೋಗ ಕಾರ್ಯಕ್ರಮ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. 7 ಸಾವಿರ ಜನರೊಂದಿಗೆ ನಡೆಯಬೇಕಿದ್ದ ಯೋಗ ಮಳೆಯಿಂದಾಗಿ ಕೇವಲ 50 ಜನರಿದ್ದ ಸಭಾಂಗಣದಲ್ಲಿ ಮಾಡುವಂತಾಯಿತು. 10 ವರ್ಷಗಳ ಹಿಂದೆ 2014ರಲ್ಲಿ ವಿಶ್ವಸಂಸ್ಥೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತ್ತು. ಅಂದಿನಿಂದ ಇದನ್ನು ವಿವಿಧ ವಿಷಯಗಳಲ್ಲಿ ಆಚರಿಸಲಾಗುತ್ತಿದೆ. 2024 ರ ಯೋಗ ದಿನದ ಥೀಮ್ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’.

LEAVE A REPLY

Please enter your comment!
Please enter your name here