ಇಸ್ರೋದಿಂದ ಸ್ವದೇಶಿ ಗಗನನೌಕೆ ‘ಪುಷ್ಪಕ್’ ಯಶಸ್ವಿ ಉಡಾವಣೆ, ಲ್ಯಾಂಡಿಂಗ್ ಪ್ರಯೋಗ

ಮಂಗಳೂರು/ಚಿತ್ರದುರ್ಗ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ರವಿವಾರ(ಜೂ.23) ಮತ್ತೊಂದು ಸಾಧನೆಗೆ ಸಾಕ್ಷಿಯಾಯಿತು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಬಳಿ ಇರುವ ಡಿಆರ್‌ಡಿಒ ಆವರಣದಲ್ಲಿ ಮರುಬಳಕೆ ಬಾಹ್ಯಾಕಾಶ ವಾಹನದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಯಿತು.

ಎಸ್‌ಯುವಿ ಕಾರಿನಷ್ಟು ದೊಡ್ಡ ಗಾತ್ರದ ರೆಕ್ಕೆ ಇರುವ ರಾಕೆಟ್ ‘ಪುಷ್ಪಕ್ ಗಗನನೌಕೆ’, ಬೆಳಿಗ್ಗೆ 7 ಗಂಟೆಗೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಮೂರನೇ ಮತ್ತು ಅಂತಿಮ ಬಾರಿಗೆ ಲ್ಯಾಂಡ್ ಆಗಬೇಕಿದ್ದ ಪ್ರಯೋಗದಲ್ಲಿ ಯಶಸ್ವಿಯಾಯಿತು. ಪುಷ್ಪಕ್ ಗಗನನೌಕೆಯು ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ವಾಹನವಾಗಿದೆ. ರಾಕೆಟ್ ರೀತಿ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳುವ ಈ ವಾಹನ, ಮರಳಿ ಭೂಮಿಗೆ ಬಂದು ಲ್ಯಾಂಡ್ ಆಗುತ್ತದೆ. ಹಾಗಾಗಿ, ಈ ವಾಹನವನ್ನು ಸ್ವದೇಶಿ ಗಗನನೌಕೆ ಎಂದು ಹೇಳಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here