ಚಪ್ಪರ ಹಾಕುವ ವೇಳೆ ವಿದ್ಯುತ್‌ ಸ್ಪರ್ಶ – ಓರ್ವನ ಸಾವು, ನಾಲ್ಕು ಮಂದಿಗೆ ಗಂಭೀರ ಗಾಯ

ಮಂಗಳೂರು/ಉಪ್ಪಿನಂಗಡಿ: ಸ್ಥಳೀಯ ಕಾರ್ಯಕ್ರಮವೊಂದಕ್ಕೆ ಚಪ್ಪರ ಹಾಕುವ ವೇಳೆ ಉದ್ದದ ಕಬ್ಬಿಣದ ‌ಟ್ರೆಸ್ ವಿದ್ಯುತ್‌ ತಂತಿಗೆ ಸ್ಪರ್ಶಿಸಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಕಡೇಶಿವಾಲಯದ ಕಾಡಬೆಟ್ಟು ಎಂಬಲ್ಲಿ ನಡೆದಿದೆ.

ಕಲ್ಲಡ್ಕದ ಶಾಮಿಯಾನ ಸಂಸ್ಥೆಯ 5 ನೌಕರರು ಕಾರ್ಯಕ್ರಮವೊಂದರ ಸಲುವಾಗಿ ಚಪ್ಪರ ಹಾಕಲು ತೆರಳಿದ್ದರು. ಚಪ್ಪರ ಹಾಕುವ ವೇಳೆ ಉದ್ದದ ಕಬ್ಬಿಣದ ‌ಟ್ರೆಸ್ ಪಕ್ಕದಲ್ಲಿ ಹಾದು ಹೋದ ಹೈ ಟೆನ್ಷನ್‌ ವಿದ್ಯುತ್‌ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ತೀವ್ರ ಶಾಕ್‌ ಗೆ ಒಳಗಾದ ಕಾರ್ಮಿಕ ಕುಂದನ್‌(18) ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಉಳಿದಂತೆ 4 ಮಂದಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಕಾರ್ಮಿಕ ಪ್ರಸನ್ನ ಅಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಮೂವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಕುಂದನ್‌ ಬಿಹಾರ ಮೂಲದವನಾಗಿದ್ದಾನೆ. ಗಾಯಗೊಂಡವರ ಪೈಕಿ ಬಬ್ಲೂ ಮತ್ತು ಪ್ರದೀಪ್‌ ಜಾರ್ಖಂಡ್‌ ಮೂಲದವರಾಗಿದ್ದರೆ, ಪ್ರದೀಪ್‌ ಪಶ್ಚಿಮ ಬಂಗಾಳದವರಾಗಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here