ಕಾರವಾರದ ಬಳಿ ಘಟನೆ – ಗೋವಾದಿಂದ ಶ್ರೀಲಂಕಾಗೆ ಹೊರಟಿದ್ದ ಕಾರ್ಗೋ ಶಿಪ್​​ನಲ್ಲಿ ಬೆಂಕಿ – ಸಿಬ್ಬಂದಿಗಳ ರಕ್ಷಣೆ

ಮಂಗಳೂರು/ಕಾರವಾರ: ಕಂಟೈನರ್ ಶಿಪ್​​ನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಕಾರವಾರದಿಂದ 50 ನಾಟಿಕಲ್ ಮೈಲಿ ದೂರದಲ್ಲಿ ಸಾಗುತ್ತಿದ್ದ ಶಿಪ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

ಬೆಂಕಿ ನಂದಿಸಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನ ಮಾಡಿದ್ದಾರೆ. ಜು.2ರಂದು ಮಲೇಷಿಯಾದಿಂದ ಹೊರಟಿದ್ದ ಶಿಪ್ ಗೋವಾಗೆ ಬಂದಿತ್ತು. ಅಲ್ಲಿಂದ ಜು.19ರಂದು ಲಂಕಾದತ್ತ ಹೊರಟಿತ್ತು. ಶ್ರೀಲಂಕಾಗೆ ಜು.21ನೇ ತಾರೀಕು ತಲುಪಬೇಕಿತ್ತು. ಕೋಸ್ಟ್ ಗಾರ್ಡ್ ಏರ್ ಕ್ರಾಫ್ಟ್, ಹೆಲಿಕಾಪ್ಟರ್ ಹಾಗೂ ಮೂರು ಬೋಟ್​​ಗಳ ಸಹಾಯದಿಂದ ಹಡಗಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿಗಳಿದ್ದು ಬೆಂಕಿ ಅನಾಹುತದಿಂದ ಯಾರಿಗೂ ಯಾವುದೇ ಗಾಯಗಳಾಗಲಿ, ಜೀವಹಾನಿ ಆಗಿಲ್ಲ ಎಂದು ಕೋಸ್ಟ್​​ಗಾರ್ಡ್​ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here