ಅಡಿಕೆ- ನಿಲುವು ಸಮರ್ಥಿಸಿಕೊಂಡ ಗೃಹಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು ಅಡಿಕೆ ಬೆಳೆಗಾರರಿಗೆ ಪ್ರೀತ್ಸಾಹ ನೀಡಬಾರದು ಎಂಬ ತಮ್ಮ ಹೇಳಿಕೆಯನ್ನು ಗೃಹಸಚಿವ ಅರಗ ಜ್ಞಾನೇಂದ್ರ ಸಮರ್ಥಿಸಿ ಕೊಂಡಿದ್ದಾರೆ.
ಸರಕಾರ ಪ್ರೋತ್ಸಾಹ ಕೊಟ್ಟು ಬಯಲು ಸೀಮೆಯಲ್ಲಿ ಹೊಸ ಅಡಿಕೆ ತೋಟ ಮಾಡವ ಅವಶ್ಯಕತೆ ಇಲ್ಲ.ಕರಾವಳಿ ,ಮಳೆನಾಡಿನಲ್ಲಿ ಪರಂಪರಾಗತವಾಗಿ ಅಡಿಕೆ ಬೆಳೆಯುತ್ತೇವೆ. ವರ್ಷಕ್ಕೆ 1 ಕೋಟಿ ಅಡಿಕೆ ಸಸಿ ಮಾರಾಟವಾಗುತ್ತಿದೆ. ಆಂದ್ರ ಪ್ರದೇಶದ 2 ಸಾವಿರ ಎಕ್ರೆ ಪ್ರದೇಶದಲ್ಲಿ ಈಗಾಗಲೇ ಫಸಲು ಬರಲು ಆರಂಭವಾಗಿದೆ.ಹೀಗಾದರೆ ಅಡಿಕೆ ದರ ಎಷ್ಟು ದಿನ ಇರಬಹುದು? ಅಡಿಕೆಗೆ ಬಂದ ರೇಟ್ ಅಡಿಕೆಗೆ ಶಾಪವಾಗಿದೆ. ಸರಕಾರದ ಬೆಂಬಲ, ಪ್ರೋತ್ಸಾಹದಿಂದ ಹೊಸ ತೋಟ ಆಗುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here