ಹಿಜಾಬ್‌ ಪ್ರಕರಣ ಇತ್ಯರ್ಥಕ್ಕೆ ತ್ರಿಸದಸ್ಯ ಪೀಠ ರಚನೆ- ಸಿಜೆಐ

ದೆಹಲಿ : ಕರ್ನಾಟಕದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವ ಪ್ರಕರಣದ ಕುರಿತು ಈಗಾಗಲೇ ಬಿನ್ನ ತೀರ್ಪು ಬಂದಿರುವುದರಿಂದ ಪ್ರಕರಣದ ಇತ್ಯರ್ಥಕ್ಕೆ ತ್ರಿಸದಸ್ಯ ಪೀಠ ರಚಿಸುವ ಕುರಿತು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಜ.23ರಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ಜೆ ಚಂದ್ರಚೂಡ್‌ ಹೇಳಿದ್ದಾರೆ. ಕಳೆದ ಅಕ್ಟೋಬರ್‌ 13ರಂದು ಹಿಜಾಬ್‌ ವಿವಾದ ಕುರಿತು ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠವು ವಿಭಿನ್ನ ತೀರ್ಪು ಪ್ರಕಟಿಸಿತ್ತು. ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ನಿಷೇಧ ಹೇರಿರುವುದರಿಂದ ಉದ್ಭವಿಸಿರುವ ಈ ಪ್ರಕರಣವನ್ನು ಇತ್ಯರ್ಥ ಪಡಿಸಲು ನ್ಯಾಯಪೀಠ ರಚಿಸಬೇಕೆಂದು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗಿತ್ತು, ಮನವಿಗೆ ಪ್ರತಿಕ್ರಯಿಸಿರುವ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣ ಇತ್ಯರ್ಥಕ್ಕೆ ತ್ರಿಸದಸ್ಯ ಪೀಠ ರಚಿಸುವ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here