ಮಂಗಳೂರು(ತಮಿಳುನಾಡು): ಕಳೆದ ಏಪ್ರಿಲ್ ತಿಂಗಳಿನಲ್ಲಿ ಚೆನ್ನೈನ ಅಪಾರ್ಟ್ ಮೆಂಟ್ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ದುರಂತವೆಂದರೆ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳನ್ನು ಎದುರಿಸಲಾಗದೆ ತಾಯಿ ಸಾವಿನ ದಾರಿ ಹಿಡಿದಿದ್ದಾರೆ.
ರಮ್ಯಾ ಆತ್ಮಹತ್ಯೆ ಮಾಡಿಕೊಂಡ ತಾಯಿ. ಅನೇಕ ಟೀಕೆಗಳನ್ನು ಎದುರಿಸಿ ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗು ಬಿದ್ದ ಘಟನೆಗೆ ತಾಯಿ ರಮ್ಯಾನೇ ಕಾರಣ ಎಂದು ಟೀಕಿಸಿದ್ದರಿಂದ ನೊಂದಿದ್ದರು ಎಂದು ತಿಳಿದುಬಂದಿದೆ. ಏಪ್ರಿಲ್ 28 ರಂದು ಚೆನ್ನೈ ಅಪಾರ್ಟ್ ಮೆಂಟ್ ನಲ್ಲಿ ಮಗುವೊಂದು ಆಕಸ್ಮಿಕವಾಗಿ ಮೇಲ್ಛಾವಣಿಯಲ್ಲಿ ಸಿಲುಕಿತ್ತು. ಅದನ್ನು ಕಂಡ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದರು. ಈ ದೃಶ್ಯ ಸಾಮಾಜಿ ಜಾಲತಾಣದಲ್ಲಿ ಹರಿದಾಡಿತ್ತು. ಮಾತ್ರವಲ್ಲದೆ, ಮಗು ಈ ರೀತಿ ಬೀಳಲು ಮಗುವಿನ ತಾಯಿ ನಿರ್ಲಕ್ಷ್ಯ ಎಂದು ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆಗಳನ್ನು ಮಾಡಿದ್ದರು. ಈ ಟೀಕೆಯಿಂದ ನೊಂದು ಮಗುವಿನ ತಾಯಿ ರಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.