ಫ್ಲೈಒವರ್‌ ಮೇಲಿಂದ ನೋಟಿನ ಮಳೆಗೆರೆದ ವ್ಯಕ್ತಿ

ಬೆಂಗಳೂರು: ಸೂಟ್‌ ಬೂಟ್‌ ಧರಿಸಿದ, ಕೊರಳಿಗೆ ಗಡಿಯಾರವೊಂದನ್ನು ನೇತು ಹಾಕಿಕೊಂಡು ದ್ವಿಚಕ್ರ ವಾಹನವೊಂದರಲ್ಲಿ ಬಂದ ವ್ಯಕ್ತಿಯೊರ್ವ ಕೆ ಆರ್‌ ಮಾರ್ಕೆಟ್‌ ಫ್ಲೈಒವರ್‌ ಮೇಲಿಂದ 10 ರೂ.ಮುಖಬೆಲೆಯ ನೋಟುಗಳನ್ನು ಕೆಳಕ್ಕೆ ಎಸೆದಿರುವ ಘಟನೆ ನಡೆದಿದೆ.ಫ್ಲೈ ಒವರ್‌ ನ ಮೇಲಿನಿಂದ ಹಣ ಬೀಳುತ್ತಿದ್ದಂತೆ ಹಣಕ್ಕಾಗಿ

ಮುಗಿಬಿದ್ದ ಜನ ಕೈಗೆ ಸಿಕ್ಕಿದ್ದನ್ನು ಜೇಬಿಗೆ ಸೇರಿಸಿದ್ದಾರೆ. ಫ್ಲೈಒವರ್‌ ನ ಎರಡೂ ಭಾಗದಿಂದಲೂ ನೋಟನ್ನು ಕೆಳಕ್ಕೆ ಎಸೆದು ಹೋಗಿದ್ದಾನೆ. ಯಾವ ಕಾರಣಕ್ಕೆ ನೋಟುಗಳನ್ನು ಎಸೆಯಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Update: ಹಣ ಎಸೆದ ವ್ಯಕ್ತಿಯನ್ನು ಅರುಣ್‌ ಎಂದು ಗುರುತಿಸಲಾಗಿದ್ದು, ಕೆ ಆರ್‌ ಮಾರ್ಕೆಟ್‌ ಠಾಣಾ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.ನಾಗರಬಾವಿಯ ಯೂಟ್ಯೂಬ್‌ ಚಾನೆಲ್‌ ವೊಂದರ ಕಛೇರಿಯಲ್ಲಿ ಹಣ ಎಸೆದ ವ್ಯಕ್ತಿ ಇರುವುದನ್ನು ಖಚಿತ ಪಡಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಕರ್ನಾಟಕ ಪೊಲೀಸ್‌ ಕಾಯ್ದೆ 92ಡಿ, ಐಪಿಸಿ 283ರ ಅಡಿ ಎನ್‌ ಸಿ ಆರ್‌ ಪ್ರಕರಣ ದಾಖಲಾಗಿದೆ.

click here for video

LEAVE A REPLY

Please enter your comment!
Please enter your name here