ಯುವಕರೇ ಎಚ್ಚರ… ಇಂತಹ ಹುಡಿ ಬಳಸದಿರಿ

ಬೆಂಗಳೂರು: ರಾಜ್ಯದ ಹೆಚ್ಚಿನ ಮಲ್ಟಿ ಜಿಮ್‌ ಗಳಲ್ಲಿ ದೇಹದ ಆರೋಗ್ಯ ಪರಿಸ್ಥಿತಿಗಳ ಹರವುಗಳನ್ನು ನಿರ್ವಹಿಸಲು ಸಹಕಾರಿ ಎಂದು ಹೇಳಿ ಮಾರಾಟ ಮಾಡುತ್ತಿರುವ ಪೌಷ್ಟಿಕಾಂಶದ ಪುಡಿಗಳಲ್ಲಿ ಹೆಚ್ಚಿನವು ನಕಲಿ ಎಂಬ ಆತಂಕಕಾರಿ ವಿಚಾರ ಹೊರಬಿದ್ದಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ರಾಜ್ಯದಲ್ಲಿ ಮಲ್ಟಿ ಜಿಮ್ ಗಳಿಂದ 81 ಬ್ರಾಂಡ್‌ ಗಳ ಪೌಷ್ಟಿಕಾಂಶದ ಪೌಡರ್‌ ನ ಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಿದ್ದು, ಈ ಪೈಕಿ 54 ನೈಜ ಬ್ರಾಂಡ್‌ ನ ಪುಡಿಗಳೇ ಅಲ್ಲ ಎಂದು ದೃಢ ಪಟ್ಟಿದೆ. ಚಿಕ್ಕಮಗಳೂರಿನ ಜಿಮ್ಮೊಂದರಲ್ಲಿ ಮಾರಾಟವಾಗುತ್ತಿದ್ದ ಪುಡಿ ಬಳಕೆಗೆ ಯೋಗ್ಯವಲ್ಲದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರದಿಯ ಬಳಿಕ ಎಚ್ಚೆತ್ತು ಕೊಂಡಿರುವ ಸರಕಾರ ಪೌಷ್ಟಿಕಾಂಶ ಪುಡಿಗಳ ತಯಾರಕ ಮತ್ತು ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಫಿಟ್‌ ನೆಸ್‌ ಕಾಪಾಡಿಕೊಳ್ಳುವ ಉತ್ಸಾಹಿ ಯುವಕರು ಇಂತಹ ನಕಲಿ ‌ಪೌಷ್ಟಿಕಾಂಶ ಪೌಡರ್ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here