ಪಿಎಂ ಕೇರ್ಸ್ – ಹೈಕೋರ್ಟ್‌ಗೆ ಅಫಿದಾವಿತ್‌ ಸಲ್ಲಿಸಿದ ಕೇಂದ್ರ

ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆಯಲ್ಲಿ ವ್ಯಾಖ್ಯಾನಿಸಿರುವಂತೆ ಪಿಎಂ ಕೇರ್ಸ್ ನಿಧಿಯು ಸಾರ್ವಜನಿಕ ಪ್ರಾಧಿಕಾರವಲ್ಲ, ಹೀಗಾಗಿ ಅದು ಕಾಯ್ದೆಯ ವ್ಯಾಪ್ತಿಗೊಳಪಡುವುದಿಲ್ಲ ಎಂದು ಕೇಂದ್ರ ಸರಕಾರವು ದಿಲ್ಲಿ ಹೈ ಕೋರ್ಟ್‌ಗೆ ತಿಳಿಸಿದೆ.

ಪಿಎಂ ಕೇರ್ಸ್ ನಿಧಿಯ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಲು ‘ಸರಕಾರಿ’ ಸಂಸ್ಥೆಯನ್ನಾಗಿ ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ದಿಲ್ಲಿ ಹೈ ಕೋರ್ಟ್‌ ನಡೆಸುತ್ತಿದೆ.2022 ಜುಲೈನಲ್ಲಿ ಕೇಂದ್ರವು ಸಲ್ಲಿಸಿದ್ದ ಒಂದು ಪುಟದ ಉತ್ತರಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸತೀಶಚಂದ್ರ ಶರ್ಮಾ ಮತ್ತು ಸುಬ್ರಮಣಿಯಂ ಪ್ರಸಾದ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರವು ಇಂದು ವಿವರವಾದ ಅಫಿಡವಿಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಾರ್ವಜನಿಕ ಹುದ್ದೆಗಳ ಮಾಜಿ ಅಧಿಕಾರಿಗಳನ್ನು ಒಳಗೊಂಡಿರುವ ವಿಶ್ವಸ್ಥ ಮಂಡಳಿಯ ಸಂಯೋಜನೆಯು ಕೇವಲ ಆಡಳಿತಾತ್ಮಕ ಅನುಕೂಲ ಮತ್ತು ಹೊಣೆಗಾರಿಕೆಗೆ ಸುಗಮ ಉತ್ತರಾಧಿಕಾರದ ಉದ್ದೇಶವನ್ನು ಹೊಂದಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

ಉಪರಾಷ್ಟ್ರಪತಿಯಂತಹ ಸರಕಾರದ ಉನ್ನತ ಸ್ಥಾನಗಳಲ್ಲಿರುವವರು ನಿಧಿಗೆ ದೇಣಿಗೆಗಳನ್ನು ಸಲ್ಲಿಸುವಂತೆ ರಾಜ್ಯಸಭೆಯ ಸದಸ್ಯರನ್ನು ಕೋರಿದ್ದರು ಮತ್ತು ಪಿಎಂ ಕೇಸರ್ರ್ ನಿಧಿಯನ್ನು ಸರಕಾರಿ ನಿಧಿಯನ್ನಾಗಿ ಬಿಂಬಿಸಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಶ್ಯಾಮ ದಿವಾನ್ ವಾದಿಸಿದ್ದರು. ಆದರೆ ಪಿಎಂಕೇರ್ಸ್ ನಿಧಿಯನ್ನು ‘ಸಾರ್ವಜನಿಕ ದತ್ತಿ ಸಂಸ್ಥೆ ’ ಎಂದು ಬಣ್ಣಿಸಿರುವ ಅಫಿಡವಿಟ್, ಅದು ಸ್ವಯಂಪೇರಿತ ದೇಣಿಗೆಗಳನ್ನು ಮಾತ್ರ ಸ್ವೀಕರಿಸುತ್ತದೆ ಮತ್ತು ಅದು ಕೇಂದ್ರ ಸರಕಾರದ ವ್ಯವಹಾರವಾಗಿಲ್ಲ. ಅದು ಸರಕಾರದಿಂದ ಯಾವುದೇ ಆರ್ಥಿಕ ನೆರವನ್ನು ಪಡೆಯುತ್ತಿಲ್ಲ ಎಂದು ಹೇಳಿದೆ.

LEAVE A REPLY

Please enter your comment!
Please enter your name here