ಲಾಡ್ಜ್‌ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ

ಮಂಗಳೂರು: ನಗರದ ಲಾಡ್ಜೊಂದರ ಕೊಠಡಿಯಲ್ಲಿ ದಂಪತಿಗಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಫಳ್ನೀರ್ ನ ಲಾಡ್ಜೊಂದಕ್ಕೆ ಫೆ.6 ರಂದು ಬಂದಿದ್ದ ಕೇರಳ ಮೂಲದ ರವೀಂದ್ರ (55), ಸುಧಾ (50) ಸಾವನ್ನಪ್ಪಿದ ದಂಪತಿ. ಮೃತರು ಮೂಲತಃ ಕೇರಳದ ಬಟ್ಟೆ ವ್ಯಾಪಾರಿಗಳೆಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here