ಡ್ರಗ್ಸ್‌  ಮಾಫಿಯಾ- ಮಕ್ಕಳ ಹೆತ್ತವರಿಗೆ ಕರೆಗಂಟೆ ಬಾರಿಸಿದ ಕೇರಳದ ಬಾಲಕಿ

ಕೋಝಿಕ್ಕೋಡ್:‌ ಯುವ ಪೀಳಿಗೆ ಮಾದಕ ದ್ರವ್ಯ ಬಳಸುವುದರ ವಿರುದ್ದ ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು  ನಡೆಯುತ್ತಿರುವಂತೆಯೇ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಹೆತ್ತವರಿಗೆ ಕರೆಗಂಟೆಯಾಗಬಲ್ಲ ಪ್ರಕರಣವೊಂದು ಕೇರಳದ ಕ್ಯಾಲಿಕಟ್‌ ನಲ್ಲಿ ಬೆಳಕಿಗೆ ಬಂದಿದೆ. ಏಳನೇ ತರಗತಿಯಲ್ಲಿ ಕಲಿಯುತ್ತಿರುವ ವೇಳೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸೇವಿಸಿ ಡ್ರಗ್‌ ಮಾಫಿಯಾಕ್ಕೆ ಸಿಲುಕಿ ಡ್ರಗ್ಸ್‌  ಸಾಗಾಟದ ಕೆಲಸಗಳನ್ನು ಮಾಡುತ್ತಿದ್ದ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಡ್ರಗ್‌ ಮಾಫಿಯಾದ ಬೆಚ್ಚಿ ಬೀಳಿಸುವ ಕರಾಳ ಮುಖವನ್ನು ಬಹಿರಂಗಪಡಿಸಿದ್ದು, ನಾಡಿನಾದ್ಯಂತ ಮಕ್ಕಳ ಹೆತ್ತವರಲ್ಲಿ ಆತಂಕ ಸೃಷ್ಟಿಸುವುದೊರೊಂದಿಗೆ ಸಂಚಲನ ಮೂಡಿಸಿದೆ. ಬಾಲಕಿ ನೀಡಿದ ಮಾಹಿತಿಯಾಧರಿಸಿ ಪ್ರಕರಣಕ್ಕೆ ಸಂಬಂಧಿಸಿದ ಓರ್ವನನ್ನು ಬಂಧಿಸಲಾಗಿದೆ. ಬಂಧಿತ ಯುವಕನನ್ನು ಈ ಹಿಂದೆ ಕೂಡ ಮಾದಕ ದ್ರವ್ಯ ಹ್ಯಾಶಿಶ್‌ ಆಯಿಲ್‌ ಮಾರಾಟ ಪ್ರಕರಣದಲ್ಲಿ  ಬಂಧಿಸಲಾಗಿತ್ತು. ಈತನ ಸ್ನೇಹಿತನಾಗಿರುವ ಇನ್ನೊರ್ವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು,  ಮಾಹಿತಿ ಕಲೆ ಹಾಕಿದ್ದಾರೆ. ಈತನೂ ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ಬಗ್ಗೆ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು.

ಕೋಝಿಕ್ಕೋಡ್ ಸಿಟಿ ನಾರ್ಕೋಟಿಕ್ಸ್ ಸೆಲ್ ಸಹಾಯಕ ಕಮಿಷನರ್ ಪ್ರಕಾಶನ್ ಪಡನ್ನಯಿಲ್ ತನಿಖೆಯ ನೇತೃತ್ವ ವಹಿಸಿದ್ದು, ಬಾಲಕಿಯ ಹೇಳಿಕೆ ಆಧರಿಸಿ ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಡ್ರಗ್ ಮಾಫಿಯಾದ ಸುಳಿಗೆ ಸಿಕ್ಕಿಬಿದ್ದಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದು, ಆಕೆಯ ಗೆಳೆಯ ಡ್ರಗ್ಸ್‌ ಮಾಫಿಯಾ ಗುಂಪಿಗೆ ಸೇರಿಸಿದ್ದ. 7ನೇ ತರಗತಿ ಮುಗಿದಾಗಿನಿಂದ ಗ್ಯಾಂಗ್‌ಗೆ ಕ್ಯಾರಿಯರ್ ಆಗಿದ್ದ ಆಕೆ ಶಾಲೆಯ ಸಮಯದ ನಂತರ ಈ ಕೆಲಸ ಮಾಡುತ್ತಿದ್ದಳು. ಮಾದಕ ದ್ರವ್ಯ ಸೇವಿಸಿ ಹೆತ್ತ ತಾಯಿಯನ್ನೇ ರೇಪ್‌ ಮಾಡಿದ ಪ್ರಕರಣಗಳು ನಮ್ಮ ಕಣ್ಣ ಮುಂದಿರುವಾಗ ಡ್ರಗ್ಸ್‌ ಮಾಫಿಯಾದ ವಿರುದ್ದ ಹೋರಾಡ ಬೇಕಾಗಿರುವುದು ನಮ್ಮೆಲ್ಲರ ಆಧ್ಯತೆಯಾಗಬೇಕಾಗಿದೆ.  

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ👇

LEAVE A REPLY

Please enter your comment!
Please enter your name here