ಅಂತಿಮ ಕ್ಷಣದಲ್ಲಿ ಬಿಜೆಪಿ ಸೇರ್ಪಡೆಯಾಗದೆ ದೂರ ಉಳಿದ ಅನಂತ್‌ನಾಗ್

ಬೆಂಗಳೂರು: ಫೆ.22ರಂದು ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರುವ ಕಾರ್ಯಕ್ರಮದಿಂದ ಚಿತ್ರ ನಟ ಅನಂತ್‌ ನಾಗ್‌ ದೂರ ಉಳಿದಿದ್ದಾರೆ.

ಬಾರಿ ಪ್ರಚಾರದ ನಡುವೆ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಈ ಹಿಂದೆ ಜೆಡಿಎಸ್‌ ನಲ್ಲಿ ಗುರುತಿಸಿ ಕೊಂಡಿದ್ದ ಅನಂತ್‌ ನಾಗ್‌ ಕಮಲ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಅಂತಿಮ ಕ್ಷಣದಲ್ಲಿ ಸೇರ್ಪಡೆಯಾಗದೆ ದೂರ ಉಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಬಗ್ಗೆ ಪಕ್ಷದ ನಾಯಕರಿಂದಾಗಲೀ, ಸ್ವತಃ ಅನಂತ್‌ ನಾಗ್‌ ಅವರಿಂದಾಗಲಿ, ಯಾವುದೇ ಪ್ರತಿಕ್ರಿಯೆ, ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪಕ್ಷ ಸೇರುವುದರಲ್ಲಿ ಯಾವುದೇ ಬದಲಾವಣೆ ಇಲ್ಲ,  ಮುಂದೂಡಿಕೆಯಾಗಿದೆಯಷ್ಟೇ ಎಂದು ಪಕ್ಷದ ಮೂಲದಿಂದ ತಿಳಿದು ಬಂದಿದೆ. 

LEAVE A REPLY

Please enter your comment!
Please enter your name here