ಬಸ್ಸಿನಲ್ಲಿ ಯುವತಿ ಮೇಲೆ ಮೂತ್ರ ಮಾಡಿದನೇ ಸಹ ಪ್ರಯಾಣಿಕ ಯುವಕ?

ಮಂಗಳೂರು: ವಿಜಯಪುರದಿಂದ ಮಂಗಳೂರಿಗೆ ಬರುತ್ತಿದ್ದ ನಾನ್‌ ಎಸಿ ಸ್ಲೀಪರ್‌ ಬಸ್ಸಿನಲ್ಲಿ ಪ್ರಯಾಣಿಕನೋರ್ವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಆಸನದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆಯ ಬಗ್ಗೆ ಸುದ್ದಿ ಜಾಲತಾಣವೊಂದು ವರದಿ ಮಾಡಿದೆ.

ಹುಬ್ಬಳ್ಳಿ ಸಮೀಪದ ಕಿರೇಸೂರು ಡಾಬಾ ಬಳಿ ಬಸ್ಸು ನಿಂತಿದ್ದಾಗ ಪ್ರಯಾಣಿಕರೆಲ್ಲರೂ ಕೆಳಗಿದ ವೇಳೆ ಕಂಠ ಪೂರ್ತಿ ಕುಡಿದಿದ್ದ ಎನ್ನಲಾದ  ಯುವಕನೊಬ್ಬ ಯುವತಿ ಆಸನದ ಮೇಲೆ ಮೂತ್ರ ಮಾಡಿದ್ದಾನೆ ಎಂದು ಹೇಳಲಾಗಿದೆ. ಊಟ ಮುಗಿಸಿ ಬಂದ ಯುವತಿ ಇದನ್ನು ನೋಡಿ ಡ್ರೈವರ್‌‌ , ಕ್ಲೀನರ್‌ ಗೆ ಮಾಹಿತಿ ನೀಡಿದ್ದಾಳೆ. ಡ್ರೈವರ್‌‌ , ಕ್ಲೀನರ್‌ ಸೇರಿದಂತೆ ಎಲ್ಲಾ ಸಹ ಪ್ರಯಾಣಿಕರು 30 ರ ಹರೆಯದ ಯುವಕನನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಆದರೆ ಸಂತ್ರಸ್ಥೆ ಯುವತಿಯಾಗಲೀ , ಬಸ್‌ ಸಿಬ್ಬಂದಿಯಾಗಲಿ ಈ ಕುರಿತು ದೂರು ದಾಖಲಿಸಿಲ್ಲ. ಆದರೆ ಹೇಯವಾಗಿ ವರ್ತಿಸಿದ ಯುವಕನನ್ನು ಅಲ್ಲಿಯೇ ಬಿಟ್ಟು ಬಸ್ಸು ಮಂಗಳೂರಿಗೆ ಪ್ರಯಾಣ ಮುಂದುವರಿಸಿದೆ. ಯುವತಿ ಮತ್ತು ಆಕೆಯ ಸ್ನೇಹಿತರು ಹುಬ್ಬಳ್ಳಿಯಲ್ಲಿ ಇಳಿದುಕೊಂಡಿದ್ದಾರೆ. ವಿಮಾನದಲ್ಲಿ ಸಹಪ್ರಯಾಣಿಕರೊಬ್ಬರ ಮೇಲೆ ಮೂತ್ರ ಮಾಡಿದ ಘಟನೆಯ ನೆನೆಪು ಮಾಸುವ ಮೊದಲು ಇಂತಹದ್ದೊಂದು ಘಟನೆ ಬಸ್ಸಿನಲ್ಲಿ ನಡೆದಿದೆ. 

update:  ಆರೋಪಿ ಯುವಕ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೇಲೆ ಮೂತ್ರ ಮಾಡಿಲ್ಲ ಬದಲಾಗಿ ಪಾನಮತ್ತನಾಗಿದ್ದ ಆರೋಪಿ ಯುವತಿ ಬಸ್ಸು ಹತ್ತುತ್ತಿದ್ದ ವೇಳೆ ಸೀಟ್‌ ನಂಬರ್‌ 3 ರ ಮೇಲೆ ಮೂತ್ರ ಮಾಡುತ್ತಿದ್ದ. ಇದನ್ನು ಯುವತಿ ಬಸ್ಸು ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ತಕ್ಷಣ ಬಸ್ಸು ಚಾಲಕ ಮತ್ತು ನಿರ್ವಾಹಕ ನೀರಿನಿಂದ ಸೀಟು ತೊಳೆದು ಶುಚಿಗೊಳಿಸಿದ್ದಾರೆ ಮತ್ತು ಯುವತಿಗೆ ಪರ್ಯಾಯ ಸೀಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಾಲಕ ಮತ್ತು ನಿರ್ವಾಹಕರಿಂದ ಹೇಳಿಕೆ ಪಡೆಯಲಾಗಿದೆ.

LEAVE A REPLY

Please enter your comment!
Please enter your name here