ಏರಿದ ತಾಪಮಾನ – ಕಾಡಲಿದೆಯೇ ವೈರಲ್‌ ರೋಗಗಳು?

ಬೆಂಗಳೂರು: ಕರ್ನಾಟಕದಲ್ಲಿ ಅವಧಿಗೂ ಮುನ್ನ ಬೇಸಿಗೆ ಕಾಲಿಡಲಿದ್ದು ತಾಪಮಾನ ಧಿಡೀರ್‌ ಏರಿಕೆಯಾಗಿ ರಣ ಬಿಸಿಲು ಕಾಡಲಿದೆ  ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ರಣ ಬಿಸಿಲು ತೀರ್ವಗೊಳ್ಳುತ್ತಿದ್ದು ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಚಿಕನ್‌ ಫಾಕ್ಸ್‌ ಕಾಣಿಸಿಕೊಳ್ಳುತ್ತಿದೆ.

ಏರುತ್ತಿರುವ ತಾಪಮಾನದಿಂದಾಗಿ ಮೇ ವರೆಗೂ ಚಿಕನ್‌ ಫಾಕ್ಸ್‌ ಪ್ರಕರಣ ಏರಿಕೆಯಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಈ ಸೋಂಕು ಗಾಳಿಯ ಮೂಲಕ ಹರಡುತ್ತದೆ. ಜ್ವರ, ಶೀತ ,ತಲೆನೋವು, ಚಿಕನ್‌ ಫಾಕ್ಸ್‌ ನ ಮೊದಲ ಲಕ್ಷಣಗಳಾಗಿದ್ದು ಖಾಯಿಲೆಗೆ ಒಳಗಾಗುವ ವ್ಯಕ್ತಿಯ ಮುಖ ಮತ್ತು ಶರೀರದ ಮೇಲೆ ಗುಳ್ಳೆಗಳು ಕಂಡು ಬರುತ್ತದೆ. ಈ ಗುಳ್ಳೆಗಳು 5 ರಿಂದ 6 ದಿನ ಇನ್ನಿಲ್ಲದಂತೆ ಕಾಡಲಿದೆ. ಶುಚಿತ್ವ, ಆರೋಗ್ಯಕರ ಆಹಾರ , ನೀರು, ಮತ್ತು ಚಿಕನ್‌ ಫಾಕ್ಸ್‌ ಪೀಡಿತರಿಂದ ದೂರ ಇರುವ ಮೂಲಕ ಇದು ಹರಡದಂತೆ ನೋಡಿಕೊಳ್ಳಬಹುದು. ತಾಪಮಾನದ ಏರಿಕೆ ಶುಷ್ಕ ಹವಾಮಾನದ ಮುನ್ಸೂಚನೆಯಾಗಿದ್ದು ಬಿಸಿಲ ಝಳದಿಂದ  ತೀವೃ ತರದ ಸೆಕೆ  ನಾಗರಿಕರು ಕಾಡಲಿದೆ. 

LEAVE A REPLY

Please enter your comment!
Please enter your name here