ಮೊಬೈಲ್‌ ಪತ್ತೆಗೆ ಹೊಸ ಪೋರ್ಟಲ್‌- ಎಸ್ಪಿ ,ಡಾ.ಅಮಟೆ

ಮಂಗಳೂರು : ಕಳವು ಮಾಡಲಾದ, ಕಳೆದುಹೋದ ಅಥವಾ ಸುಲಿಗೆಯಾದ ಮೊಬೈಲ್‌ ಫೋನ್‌ಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ ದುರ್ಬಳಕೆಯನ್ನು ತಡೆಯುವಲ್ಲಿ ದ.ಕ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಬೈಲ್‌ ಪತ್ತೆಗೆ ಹೊಸ ಪೋರ್ಟಲ್‌ ಬಂದಿದ್ದು ಸಿಇಐಆರ್‌ ಪೋರ್ಟಲ್‌ ಮೂಲಕ ಕಳವಾದ ಮೊಬೈಲ್‌ ಅನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಈ ಪೊರ್ಟಲ್‌ ಬಳಸಿ ದ,ಕ ಪೊಲೀಸರು ಇಗಾಗಲೇ 10ದಿನಗಳಲ್ಲಿ 110 ಮೊ. ಫೋನ್‌ ಗಳನ್ನು ಪತ್ತೆ ಹಚ್ಚಿದ್ದಾರೆ. ಒಂದೇ ದಿನದಲ್ಲಿ 15 ಫೋನ್‌ ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಲಾಗಿದೆ.  ಇದೊಂದು ಪರಿಣಾಮಕಾರಿ ಪೋರ್ಟಲ್‌ ಆಗಿದ್ದು ದ.ಕ ಪೊಲೀಸರು ಪೊರ್ಟಲ್‌ ಬಳಸಿ ಮೊಬೈಲ್‌ ಗಳ ಪತ್ತೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ ಎಂದು ದ.ಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಮಟೆ ವಿಕ್ರಮ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here