ಸಬ್‌ ರಿಜಿಸ್ಟ್ರಾರ್‌ ಕಛೇರಿಗೆ ನೂತನ ಸಾಪ್ಟ್‌ ವೇರ್‌- ಆರ್‌ ಅಶೋಕ್‌

ಬೆಂಗಳೂರು : ಆಸ್ತಿ ನೋಂದಣಿ, ವಿವಾಹ ನೋಂದಣಿ ಸೇರಿದಂತೆ ಯಾವುದೇ ನೋಂದಣಿ ಮಾಡಿಸಬೇಕಿದ್ದರು ಸಬ್‌ ರಿಜಿಸ್ಟ್ರಾರ್‌ ಕಛೇರಿಯಲ್ಲಿ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಇನ್ನು ಮುಂದೆ ಗಂಟೆಗಟ್ಟಲೆ ಕಾಯುವ ಪ್ರಮೇಯ ಇಲ್ಲದೆ ಕೆಲವೇ ನಿಮಿಷಗಳಲ್ಲಿ ನೋಂದಣಿ ಕಾರ್ಯ ಪೂರ್ಣಗೊಳ್ಳಲಿದೆ ಸರಕಾರ ಹೊಸದಾಗಿ ಅಳವಡಿಸಿರುವ ತಂತ್ರಾಂಶ ಸಾಪ್ಟ್ ವೇರ್‌ನಿಂದ ಇದು ಸಾಧ್ಯವಾಗಿದೆ ರಾಜ್ಯ ಸರಕಾರದ ಕಂದಾಯ ಇಲಾಖೆ ಸಬ್‌ ರಿಜಿಸ್ಟ್ರಾರ್‌ ಕಛೇರಿಗಳಲ್ಲಿ ಶೀಘ್ರ ನೋಂದಣಿಗಾಗಿ ಕಾವೇರಿ 2.0ನೂತನ ಸಾಪ್ಟ್ ವೇರ್‌ ಅಳವಡಿಸಿತ್ತು. ಕೇವಲ 7ರಿಂದ 10ನಿಮಿಷದಲ್ಲಿ ನೋಂದಣಿ ಕಾರ್ಯ ಪೂರ್ಣಗೊಳ್ಳಲಿದೆ. ಇದರಿಂದ ವಂಚನೆ ಮತ್ತು ಮಧ್ಯವರ್ತಿಗಳ ಕಾಟ ತಪ್ಪಲಿದೆ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ತಿಳಿಸಿದ್ದಾರೆ. ಬೆಳಗಾವಿ ಹಾಗು ಚಿಂಚೋಳಿ ಸಬ್‌ ರಿಜಿಸ್ಟ್ರಾರ್‌ ಕಛೇರಿಗಳಲ್ಲಿ ಪೈಲಟ್‌ ಪ್ರಾಜೆಕ್ಟ್‌ ಆಗಿ ಇದನ್ನು ಅಳವಡಿಸಿ ಯಶಸ್ವಿಯಾಗಿದ್ದು ಇನ್ನು ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ಸಭ್‌ ರಿಜಿಸ್ಟ್ರಾರ್‌ ಕಛೇರಿಗಳಲ್ಲಿ ಹೊಸ ಸಾಪ್ಟ್‌ ವೇರ್‌ ಅಳವಡಿಸಲಾಗುವುದು ಎಂದು ಸಚಿವ ಅಶೋಕ್‌ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here