ಮಾ 25 – ಮತ್ತೆ ರಾಜ್ಯದ ಹಾದಿ ಹಿಡಿಯಲಿರುವ ಪ್ರಧಾನಿ ಮೋದಿ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಾ 25 ರಂದು ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿಯ ಚುನಾವಣೆ ಪ್ರಚಾರ ಅಭಿಯಾನ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದ್ದು ಮಾ 25 ಕ್ಕೆ ದಾವಣಗೆರೆಯಲ್ಲಿ ಸಮಾಪನಗೊಳ್ಳಲಿದೆ. ಇದಕ್ಕಾಗಿ ಇಲ್ಲಿನ ಪಿ ಬಿ ರಸ್ತೆಯ ಜಿ ಎಂ ಐ ಟಿ ಕಾಲೇಜು ಪಕ್ಕದ 400 ಎಕ್ರೆ ಪ್ರದೇಶದಲ್ಲಿ ಸಮಾರಂಭಕ್ಕಾಗಿ ತಯಾರಿ ನಡೆಯುತ್ತಿದೆ. ಸಿದ್ದರಾಮೋತ್ಸವಕ್ಕೆ ಸೇರಿದ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಬೇಕೆಂದು ಬಿಜೆಪಿ ನಿರ್ಧರಿಸಿದೆ.

    LEAVE A REPLY

    Please enter your comment!
    Please enter your name here