ಮಾಡಿದ್ದು ರೀಲ್‌….. ನಡೆದಿದ್ದು ರಿಯಲ್

ಮಂಗಳೂರು: ತನ್ನ ಕಾಲೇಜು ಸಹಪಾಠಿಗಳೊಂದಿಗೆ ಇನ್ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದ ವೇಳೆ 20 ವರ್ಷದ ಯುವಕನೊಬ್ಬ ಕಟ್ಟಡದ ಕಿಟಕಿಯ ಚಾವಣಿ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಮಾ.17ರಂದು ಘತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದ್ದು, ಈ ಘಟನೆ ಆತನ ಇಬ್ಬರು ಗೆಳೆಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೃತ ಯುವಕನನ್ನು ಆಶುತೋಷ್ ಸಾಹು ಎಂದು ಗುರುತಿಸಲಾಗಿದೆ.

ಬಿಲಾಸ್‌ಪುರ ಜಿಲ್ಲೆಯ ವಿಜ್ಞಾನ ಕಾಲೇಜಿನಲ್ಲಿ ನಡೆದಿದ್ದು, ಸಾಹು ತನ್ನ ಗೆಳೆಯರೊಂದಿಗೆ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಸಾಹು ಮತ್ತು ಆತನ ನಾಲ್ಕು ಮಂದಿ ಗೆಳೆಯರು ಕಾಲೇಜು ಕಟ್ಟಡದ ಮೇಲೆ ಹೋಗಿ ಅಲ್ಲಿಂದ ಆತ ಕಿಟಕಿಯ ಚಾವಣಿಯ ಮೇಲೆ ಇಳಿದಿದ್ದಾನೆ. ವಿಡಿಯೊದಲ್ಲಿ ಆತ ಚಾವಣಿಯ ಮೇಲೆ ಜಿಗಿಯುತ್ತಿರುವುದು ದಾಖಲಾಗಿದೆ. ಆತನ ಗೆಳೆಯರ ಪೈಕಿ ಒರ್ವ “ನಿನ್ನ ತೂಕಕ್ಕೆ ಚಾವಣಿ ಮುರಿಯುವುದಿಲ್ಲ” ಎಂದು ಹೇಳಿರುವುದು ದಾಖಲಾಗಿದೆ. ಸಾಹುವಿನ ಸಾವಿನ ಕುರಿತಂತೆ ಆತನ ಮನೆಯವರು  ದೂರು ನೀಡಲು ನಿರಾಕರಿಸಿದ್ದಾರೆ. ಆಕಸ್ಮಿಕ ಸಾವಿನ ಕುರಿತು ಸರ್ಕಂದ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಲಾಸ್‌ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, “ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಎಲ್ಲ ಸಂದರ್ಭಗಳಲ್ಲೂ ಮುನ್ನೆಚ್ಚರಿಕೆ ಅಗತ್ಯ” ಎಂದು ಎಚ್ಚರಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here