ಮಂಗಳೂರು : ಮುಂಬರುವ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಲಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಯಲ್ಲಿಯೂ ಗೊಂದಲ ಸೃಷ್ಟಿಯಾಗಿದ್ದು ಆಯ್ಕೆ ಸಂಬಂಧ ರಾಜ್ಯ ನಾಯಕರ ಕೋರ್ ಕಮಿಟಿ ಸಭೆ ಇದುವರೆಗೂ ನಡೆದಿಲ್ಲ. ಎಲ್ಲಾ ಚರ್ಚೆ, ಪರಿಶೀಲನೆ ಹೈಕಮಾಂಡ್ ನಲ್ಲಿಯೇ ನಡೆಯುತ್ತಿದೆ ಎನ್ನಲಾಗಿದೆ. ಗೆಲ್ಲುವ ಗ್ಯಾರಂಟಿ ಇರುವ ಅಭ್ಯರ್ಥಿಗಳ ಮೊದಲ ಪಟ್ಟಿ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಗುವ ಸಾಧ್ಯತೆಯಿದೆ ಎನ್ನಲಾಗಿದ್ದು ಕೆಲವು ಹಾಲಿ ಶಾಸಕರು ಅವಕಾಶ ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಒಂದೆರಡು ಸಚಿವರು ಸೇರಿದಂತೆ 10 ರಿಂದ 15 ಹಾಲಿ ಶಾಸಕರು ಟಿಕೆಟ್ ವಂಚಿತರಾಗಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು 25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಬಲರಾಗಿರುವ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅವರನ್ನು ಮನವೊಲಿಸಿ ಒಬ್ಬರಿಗೆ ಟಿಕೆಟ್ ನೀಡುವುದು ಬಿಜೆಪಿ ಗೆ ಸವಾಲಾಗಿದೆ. ಈ ಕೂಟದಲ್ಲಿ ಬಿ ಎಸ್ ವೈ ಮತ್ತು ಸಂತೋಷ್ ಜಿ ಬೆಂಬಲಿಗರಿದ್ದಾರೆನ್ನುವುದು ಪ್ರಮುಖ ವಿಷಯವಾಗಿದೆ. ಇನ್ನು ಕಳೆದ ಬಾರಿಯಂತೆ ಈ ಬಾರಿಯು ಮದ್ಯರಾತ್ರಿ ನಂತರ ಬಿಜೆಪಿ ನಾಲ್ಕು ಹಂತಗಳಲ್ಲಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.