ದೂರಿಗೆ ಕಾರಣವಾಯ್ತು ತಾಪ್ಸಿ ಪನ್ನು ಧರಿಸಿದ್ದ ಹೊನ್ನು

ಮಂಗಳೂರು : ಮಾರ್ಚ್ 12 ರಂದು ಮುಂಬೈ ನಲ್ಲಿ ನಡೆದ ಲಾಕ್ಮೇ ಫ್ಯಾಷನ್ ವೀಕ್ ನಲ್ಲಿ ಭಾಗವಹಿಸಿದ್ದ ಖ್ಯಾತ ಹಿಂದಿ ಚಿತ್ರನಟಿ ತಾಪ್ಸಿಪನ್ನು ವಿರುದ್ಧ ದೂರು ದಾಖಲಾಗಿದೆ.


ಮೈ ಮಾಟ ಕಾಣುವ ಬಟ್ಟೆ ಧರಿಸಿ, ಅದರೊಂದಿಗೆ ಲಕ್ಷ್ಮಿದೇವಿ ವಿಗ್ರಹವಿರುವ ಆಭರಣ ಧರಿಸಿ ರಾಂಪ್ ವಾಕ್ ಮಾಡಿರುವುದು ಹಿಂದೂ ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿದೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದಿರುವ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಗೌರ್ ದೂರು ದಾಖಲಿಸಿದ್ದಾರೆ. ಗೌನ್ ಧರಿಸಿ ರಾಂಪ್ ವಾಕ್ ಮಾಡಿದ್ದ ತಾಪ್ಸಿ ಎಲ್ಲರ ಗಮನ ಸೆಳೆದಿದ್ದರು. ತಾಪ್ಸಿಯ ಗ್ಲಾಮರಸ್ ಫೋಟೋ ಒಂದೆಡೆ ವೈರಲ್ ಆಗುತ್ತಲೇ ಇನ್ನೊಂದೆಡೆಯಿಂದ ಆಕ್ರೋಶ ವ್ಯಕ್ತವಾಗಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here