



ಮಂಗಳೂರು: ಕೆಲ ದಿನಗಳ ಹಿಂದೆ ಮೆಟ್ಟಿಲು ಬಾವಿ ಕುಸಿದು 36 ಜನರ ಸಾವಿಗೆ ಕಾರಣವಾಗಿದ್ದ ಬಲೇಶ್ವರ ಮಹಾದೇವ ದೇವಸ್ಥಾನದ ಕೆಲ ಭಾಗವನ್ನು ನೆಲಸಮಗೊಳಿಸಲಾಗಿದೆ. ಕುಸಿದ ದೇವಸ್ಥಾನದ ಭಾಗವು ಅಕ್ರಮ ರಚನೆಯಾಗಿದ್ದು ಇಂಧೋರ್ ಮುನ್ಸಿಪಲ್ ಕಾರ್ಪೊರೇಷನ್ ಕಳೆದ ವರ್ಷವೇ ತೆರವಿಗೆ ಆದೇಶ ನೀಡಿತ್ತು.







ಆದರೆ ದೇವಾಲಯದ ಟ್ರಸ್ಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ನೆಲಸಮ ಕಾರ್ಯದಿಂದ ಹಿಂದೆ ಸರಿದಿತ್ತು. ದೇವಸ್ಥಾನದ ಟ್ರಸ್ಟ್ ನ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಅಕ್ರಮ ಕಟ್ಟಡ ತೆರವು ಕಾರ್ಯ ಮಾಡದೇ ಇದ್ದ ಕಾರಣ ಮುನ್ಸಿಪಲ್ ಕಾರ್ಪೊರೇಷನ್ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ಐವತ್ತು ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.














