ಮಂಗಳೂರು : ಹುಲಿ ಸಂರಕ್ಷಣಾ ಯೋಜನೆಯ 50ನೇ ವರ್ಷದ ಸುವರ್ಣ ಸಂಭ್ರಮೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಿರುವ ಪ್ರಧಾನಿ ಮೋದಿ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಲಿಗಣತಿ ವರದಿಯನ್ನು ಬಿಡುಗಡೆ ಮಾಡಿದರು.
2018ರಲ್ಲಿ 2967 ರಷ್ಟಿದ್ದ ಹುಲಿಗಳ ಸಂಖ್ಯೆ 2022 ರ ಹೊತ್ತಿಗೆ ಭಾರತದಲ್ಲಿ 3167 ರಷ್ಟಾಗಿದೆ. 4 ವರ್ಷದಲ್ಲಿ ಹುಲಿಗಳ ಸಂಖ್ಯೆ 200 ರಷ್ಟು ಹೆಚ್ಚಳವಾಗಿದೆ ಎಂದು ಪ್ರಧಾನಿ ಹೇಳಿದರು. ಹುಲಿಗಣತಿ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಂಗೋಲಿಯ, ತಂಜಾನೀಯ, ಇತಿಯೋಪಿಯಾ, ನೇಪಾಳ, ಭೂತಾನ್, ನೈಜೆರಿಯ, ಕೀನ್ಯಾ, ಬಾಂಗ್ಲಾದೇಶ ವಿಯೆಟ್ನಾಮ್, ಅಮೆರಿಕ ಹಾಗೂ ಭಾರತದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸೇರಿ ಸಾವಿರದ ಇನ್ನೂರರಷ್ಟು ಜನರು ಭಾಗಿ ಆಗಿದ್ದರು.