ಸೆಕ್ಸ್‌ ಗೆ ʼನೋʼಎಂದ ಪತ್ನಿ- ಉಸಿರುಗಟ್ಟಿಸಿ ಸಾಯಿಸಿದ ಕಿರಾತಕ ಪತಿ

ಮಂಗಳೂರು: ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ. ಆದರೆ ಇವರಿಬ್ಬರ ಜಗಳ ಶುರುವಾಗಿದ್ದೇ ಉಂಡು ಮಲಗಿದ ಮೇಲೆ. ಪತಿ ಮಹಾಶಯ ಮಡದಿಯಲ್ಲಿ ಸೆಕ್ಸ್‌ ಮಾಡುವ ಬಗ್ಗೆ ಇಂಗಿತ ವ್ಯಕ್ತ ಪಡಿಸಿದ್ದಾನೆ. ಪತ್ನಿ ಇದಕ್ಕೆ ಒಪ್ಪದಿದ್ದಾಗ ಕೋಪಗೊಂಡ ಪತಿ ಆಕೆಯ ಮೂಗು ಬಾಯಿ ಒತ್ತಿ ಹಿಡಿದು ಉಸಿರು ಕಟ್ಟಿಸಿ ಸಾಯಿಸಿದ್ದಾನೆ.

ಕೇರಳದ ಎರ್ನಾಕುಳಂನ ಪೆರಿಂದಲ್ಮಣ್ಣ ಎಂಬಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಆರೋಪಿ ಮಹಮ್ಮದ್‌ ರಫೀಕ್‌ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕುವರೆ ವರ್ಷದ ಮಗು ಜೊತೆ ದಂಪತಿಗಳು ಮಲಗಿದ್ದ ವೇಳೆ ಪತಿ ಈ ಕೃತ್ಯ ಎಸಗಿದ್ದು, ಪತ್ನಿ ಫಾತಿಮಾ ಪಹ್ನಾ(30)ಳನ್ನು ಕೊಲೆ ಮಾಡಿದ್ದಾನೆ. ಸೆಕ್ಸ್‌ ಗೆ ಆಕೆ ಒಪ್ಪದಿದ್ದಾಗ ಸಿಟ್ಟುಗೊಂಡು ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇರಬೇಕೆಂದು ಶಂಕಿಸಿ ಕೃತ್ಯ ಎಸಗಿರುವುದಾಗಿ ರಫೀಕ್‌ ಪೊಲೀಸರಿಗೆ ತಿಳಿಸಿದ್ದಾನೆ. 

LEAVE A REPLY

Please enter your comment!
Please enter your name here