ಮಂಗಳೂರು: ಇತಿಹಾಸ ಪ್ರಸಿಧ್ಧ ಪ್ರವಾಸಿತಾಣ ಗಡಾಯಿಕಲ್ಲಿಗೆ (ಜಮಲಾಬಾದ್) ಮೇ 23 ರಂದು ಸಂಜೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ನಿನ್ನೆ ಸಂಜೆ ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು, ಮಿಂಚು ಸಹಿತ ಮಳೆ ಬಂದಿದ್ದು ಗಡಾಯಿಕಲ್ಲಿನ ಒಂದು ಭಾಗಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿದೆ. ಜೋರಾಗಿ ಮಳೆ ಸುರಿದ ಕಾರಣ ಬೆಂಕಿ ನಂದಿಹೋಗಿದೆ ಎಂದು ನಡ ಗ್ರಾಮದ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಕಳೆದ ವರ್ಷವೂ ಇದೇ ಭಾಗಕ್ಕೆ ಸಿಡಿಲು ಬಡಿದು ಕಲ್ಲಿನ ಸ್ವಲ್ಪ ಭಾಗ ಸಿಡಿದು ಹೋಗಿತ್ತು.