ಮಂಗಳೂರು : ಬೆಂಗಳೂರು ಮೈಸೂರು ದಶಪಥ ರಸ್ತೆಯ ಟೋಲ್ ದರದಲ್ಲಿ ಏರಿಕೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಜೂನ್ ಒಂದರಿಂದಲೇ ದುಬಾರಿ ಶುಲ್ಕ ಅನ್ವಯವಾಗುವಂತೆ ಶೇಕಡ 22ರಷ್ಟು ಟೋಲ್ ದರವನ್ನು ಹೆದ್ದಾರಿ ಪ್ರಾಧಿಕಾರ ಏರಿಕೆ ಮಾಡಿದೆ.
ಕಾರು, ವ್ಯಾನ್, ಜೀಪ್ ಏಕಮುಖ ಸಂಚಾರ ದರ 135 ರಿಂದ 165 ಕ್ಕೆ ಏರಿಕೆ ಮಾಡಲಾಗಿದೆ.
ಲಘು ವಾಹನಗಳು, ಮಿನಿ ಬಸ್ ಗಳ ಏಕಮುಖ ಟೋಲ್ ದರ 220ರಿಂದ 270ಕ್ಕೆ ಏರಿಕೆ ಆಗಿದೆ.
ಟ್ರಕ್, ಬಸ್ , ಎರಡು ಎಕ್ಸೆಲ್ ವಾಹನಗಳ ಏಕಮುಖ ಸಂಚಾರ 460 ರಿಂದ 565 ಕ್ಕೆ ಏರಿಕೆ ಮಾಡಲಾಗಿದೆ.
ಮೂರು ಎಕ್ಸೆಲ್ ವಾಹನಗಳ ಏಕಮುಖ ಸಂಚಾರ ಟೋಲ್ ದರವನ್ನು 500 ರೂಪಾಯಿಯಿಂದ 615ಕ್ಕೆ ಏರಿಕೆ ಮಾಡಲಾಗಿದೆ.
ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ 720ರಿಂದ 885 ಕ್ಕೆ ಏರಿಕೆಯಾಗಿದೆ. ಏಳು ಅಥವಾ ಅದಕ್ಕಿಂತ ಹೆಚ್ಚಿನ ಎಕ್ಸೆಲ್ ವಾಹನಗಳ ಟೋಲ್ ದರ 880 ರಿಂದ 1080ಕ್ಕೆ ಏರಿಕೆ ಆಗಿದೆ,
ಜೂನ್ ಒಂದರಿಂದ ಟೋಲ್ ದರ ಏರಿಕೆ ಆಗಿದ್ದರು ಫಾಸ್ಟ್ ಟ್ಯಾಗ್ ಹಿನ್ನೆಲೆಯಲ್ಲಿ ಟೋಲ್ ದರ ಹೆಚ್ಚಳ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ.