



ಮಂಗಳೂರು: ಜೆಸಿಬಿ ಯನ್ನು ಬಳಸಿ ಎ.ಟಿ.ಎಂ ಮೆಷಿನ್ ಕಳವು ಮಾಡಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿ ಅಂತರ್ ಜಿಲ್ಲಾ ಕಳ್ಳರನ್ನು ಸುರತ್ಕಲ್ ಪೊಲೀಸರು ಆ.15ರಂದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ 15.50 ಲಕ್ಷ ಮೌಲ್ಯದ ಸೊತ್ತು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



ಸುರತ್ಕಲ್ ಇಡ್ಯಾ ಗ್ರಾಮದ ವಿದ್ಯಾದಾಯನಿ ಇಂಗ್ಲೀಷ್ ಮೀಡಿಯಂ ಶಾಲೆಯ ಎದುರುಗಡೆ ರಾಜಶ್ರೀ ಕಟ್ಟಡದಲ್ಲಿ ಇರುವ ದಿ ಸೌತ್ ಇಂಡಿಯನ್ ಬ್ಯಾಂಕ್ ನ ಎ ಟಿ ಎಂ ನಿಂದ ಆ.4 ರಂದು ಬ್ಯಾಂಕ್ ಎಟಿಎಮ್ ಮುಂಭಾಗದ ಗಾಜನ್ನು ಒಡೆದು ಎಟಿಎಂ ಮೆಷಿನ್ ನ್ನು ಕಳವು ಮಾಡಲು ಪ್ರಯತ್ನಿಸಿ ಕೆಳ ಮಹಡಿಗೆ ಬಿಳಿಸಿ ಹೋಗಿರುವುದು ಕಂಡು ಬಂದಿದೆ.ಅದರಂತೆ ಬ್ಯಾಂಕ್ ಮ್ಯಾನೇಜರ್ ರೋಹಿತ್ ರವರು ಠಾಣೆಗೆ ದೂರು ನೀಡಿದ್ದರು.







ಅದರಂತೆ ಪ್ರಕರಣವನ್ನು ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕೈಗೆತ್ತಿಕೊಂಡು ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಧಿಸಿದ್ದಾರೆ.
ದೇವರಾಜ್ (24 ವ),ಭರತ್ ಹೆ.ಚ್. (20ವ), ನಾಗರಾಜ ನಾಯ್ಕ್ (21ವ), ಧನರಾಜ್ ನಾಯ್ಕ್ (22 ವ), ಎಂಬ ನಾಲ್ವರು ಆರೋಪಿಗಳು. ಈ ನಾಲ್ವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೊಡ್ಡತಾಂಡವರಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 50,೦೦೦/- ಮೌಲ್ಯದ ಹೀರೋ ಸ್ಪ್ಲೆಂಡರ್ ಬೈಕನ್ನು ಹಾಗೂ 2 ಆಂಡ್ರಾಯ್ಡ್ ಮೊಬೈಲುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.












