ಗಾಂಧಿ-ಸಂಕ್ಷಿಪ್ತ ಜೀವನ ಕಥನ – 4

    ಇಂಗ್ಲೆಂಡಿಗೆ ಹೊರಟ ಯುವಕ ಗಾಂಧೀ

    ಲಂಡನ್‌ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಮತ್ತು‌ ಬ್ಯಾರಿಸ್ಟರ್ ವೃತ್ತಿ ತರಬೇತಿಗಾಗಿ ಇಂಗ್ಲೆಂಡ್ಗೆ ಕಳುಹಿಸಲು ತಂದೆ ತೀರ್ಮಾನಿಸಿದರು. 1888ನೇ ಸೆಪ್ಟೆಂಬರ್‌ 4ನೇ ತಾರೀಕು ಇಂಗ್ಲೆಂಡಿಗೆ ಯುವಕ ಗಾಂಧೀ ಪ್ರಯಾಣ ಬೆಳೆಸಿದ. ಆಗ ಗಾಂಧೀಗೆ ಹತ್ತೊಂಬತ್ತು ವರ್ಷಗಳೂ ತುಂಬಿರಲಿಲ್ಲ. ಹಿಂದೂಗಳ ದೇಶವಲ್ಲದ ಇಂಗ್ಲೆಂಡಿಗೆ ಹೋದರೆ ತಮ್ಮ ರೀತಿ ನೀತಿಗಳು ಕೆಡುತ್ತದೆ ಎಂಬ ಆತಂಕ ತಾಯಿಗೆ. ಇಂಗ್ಲೆಂಡಿನಲ್ಲಿ ಮಾಂಸ ಮದ್ಯ ಮತ್ತು ವ್ಯಭಿಚಾರಗಳಿಂದ ದೂರವಿರುವುದಾಗಿ ಮಗನಿಂದ ಜೈನಮುನಿ ಬೇಚಾರ್ಜಿ ಸಮ್ಮುಖದಲ್ಲಿ ವಚನ ಪಡೆದಳು. ಎರಡು ವರ್ಷ ಎಂಟು ತಿಂಗಳ ಕಾಲ ಇಂಗ್ಲೆಂಡ್‌ ನಲ್ಲಿದ್ದ ಗಾಂಧೀ ವಚನಭ್ರಷ್ಟನಾಗಲಿಲ್ಲ.

    ಗಾಂಧೀ ವಿದ್ಯಾಭ್ಯಾಸ ಮಾಡಿದ ರಾಜ್ ಕೋಟ್‌ ನ ಆಲ್ ಫ್ರೆಡ್‌ ಹೈಸ್ಕೂಲ್‌ ( ಈಗ ಮೋಹನದಾಸ್‌ ಕರಮಚಂದ ಗಾಂಧೀ ಹೈಸ್ಕೂಲ್)

     

    LEAVE A REPLY

    Please enter your comment!
    Please enter your name here