ವಾಹನ ನೋಂದಣಿಗೆ ಹೊಸ ನಿಯಮ – ವಾಹನದ ಆರ್ ಸಿ ಗೆ ಆಧಾರ್ ಲಿಂಕ್ ಕಡ್ಡಾಯ 

ಮಂಗಳೂರು(ಬೆಂಗಳೂರು): ನೂತನ ವಾಹನಗಳ ನೋಂದಣಿ ಸೇರಿದಂತೆ 2021 ರಿಂದ ಎಲ್ಲಾ ವಾಹನ ಸಂಬಂಧಿತ ವಹಿವಾಟುಗಳಿಗೆ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಈ ಮೂಲಕ ವಾಹನ ನೋಂದಣಿ ಮತ್ತು ಇತರ ಪ್ರಕ್ರಿಯೆಗಳಲ್ಲಿ ನಕಲಿ ವಹಿವಾಟುಗಳನ್ನು ತಡೆಯಲು ಸರ್ಕಾರ ಮುಂದಾಗಿದೆ.

ಈ ಹಿಂದೆ ಪಡೆಯಲಾದ ಆಧಾರ್‌ ಕಾರ್ಡ್‌ ಹಾಗೂ ಆರ್‌ ಸಿ  ಹೆಸರು ಮತ್ತು ಮೊಬೈಲ್‌ ಫೋನ್‌ ಸಂಖ್ಯೆ ಬೇರೆ ಬೇರೆಯಾಗಿದ್ದರೆ ವಾಹನಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯುವಲ್ಲಿ ಇನ್ನುಮುಂದೆ ಸಮಸ್ಯೆ ಎದುರಾಗಲಿದೆ. ಆಧಾರ್ ಲಿಂಕ್ ಮಾಡಲಾದ ಫೋನ್ ಸಂಖ್ಯೆಯನ್ನು ಸೇರಿಸುವ ಮೂಲಕ ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸಲ್ಲಿಸುವಾಗ ವ್ಯಕ್ತಿಯು ಒನ್-ಟೈಮ್ ಪಾಸ್ ವರ್ಡ್ ಅನ್ನು ಸ್ವೀಕರಿಸುತ್ತಾನೆ. ಈ ಪಾಸ್ ವರ್ಡ್ ಆಧಾರದ ಮೇಲೆ ಅರ್ಜಿಯನ್ನು ಪೂರ್ಣಗೊಳಿಸಬಹುದಾಗಿದೆ. ಆಧಾರ್ ಲಿಂಕ್ ಮಾಡಲಾದ ಸಂಖ್ಯೆಯನ್ನು ಸೇರಿಸಲು ಮೋಟಾರು ವಾಹನ ಇಲಾಖೆ ತನ್ನ ಸಾಫ್ಟ್ ವೇರ್ ನಲ್ಲಿ 3 ಹೊಸ ವಿಚಾರಗಳನ್ನು ಸೇರಿಸಿದ್ದು, ಮಾಲೀಕರ ಆಧಾರ್ ಸಂಖ್ಯೆ, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಅರ್ಜಿಯಲ್ಲಿನ ವಿವರಗಳು ಮತ್ತು ಆಧಾರ್ ಕಾರ್ಡ್ ವಿವರಗಳು ಹೊಂದಾಣಿಕೆಯಾಗದಿದ್ದರೆ ನೋಂದಣಿಯನ್ನು ನಿರಾಕರಿಸಲಾಗುತ್ತದೆ. ವಾಹನ ಸಂಬಂಧಿತ ವಹಿವಾಟುಗಳಲ್ಲಿ ಆಧಾರ್ ಸಂಖ್ಯೆ ಇದ್ದರೆ ಪ್ರತಿ ವ್ಯಕ್ತಿಯ ಬಳಿ ಇರುವ ವಾಹನಗಳ ಸಂಖ್ಯೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತಿಳಿಯಲು ಸರ್ಕಾರಕ್ಕೆ ಸುಲಭವಾಗಲಿದೆ.

 

LEAVE A REPLY

Please enter your comment!
Please enter your name here