ತಪ್ಪಿದ ನಿಯಂತ್ರಣ- ಕೊಟ್ಟಿಗೆಹಾರದಲ್ಲಿ 200 ಅಡಿ ಆಳಕ್ಕೆ ಬಿದ್ದ ಕಾರು – ಚಾಲಕ ಮೃತ್ಯು

    ಮಂಗಳೂರು(ಕೊಟ್ಟಿಗೆಹಾರ): ಮೂಡಿಗೆರೆ ತಾಲೂಕಿನ ಬಾಳೂರು ಠಾಣ ವ್ಯಾಪ್ತಿಯ ಅಬ್ರುಕೊಡುಗೆ ಬಳಿ ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಪ್ರಪಾತಕ್ಕೆ ಕಾರೊಂದು ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅಣಜೂರು ಜಯಮ್ಮನಾಗೇಶರವರ ಪುತ್ರ ರಂಜನ್(38) ಮೃತ ದುರ್ದೈವಿ.

    ರಂಜನ್ ಜನ್ನಪುರದಲ್ಲಿ ಹೋಟೆಲ್ ನಡೆಸುತ್ತಿದ್ದು, ಜನ್ನಾಪುರದಿಂದ ಕಳಸ ಕಡೆಗೆ ಹೋಗುವಾಗ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಬ್ರುಕೊಡುಗೆ ತಿರುವು ಬಳಿ ತಡೆಗೋಡೆ ಇಲ್ಲದೆ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    LEAVE A REPLY

    Please enter your comment!
    Please enter your name here