ಫೆ.16 ರಂದು ‘ಗ್ರಾಮೀಣ ಭಾರತ ಬಂದ್‌’ – ಸಂಯುಕ್ತ ಕಿಸಾನ್ ಮೋರ್ಚಾ ಕರೆ

    ಮಂಗಳೂರು/ನವದೆಹಲಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರವರಿ 16 ರಂದು ಗ್ರಾಮೀಣ ಭಾರತ್ ಬಂದ್​ ಗೆ ರೈತ ಸಂಘಟನೆಗಳು ಕರೆ ನೀಡಿದೆ.

    ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್‌ನಡಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ರೈತ ಸಂಘಗಳು ತಮ್ಮ ಇತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಲು ಫೆ.16 ರಂದು ದೇಶಾದ್ಯಂತ ಗ್ರಾಮೀಣ ಭಾರತ್ ಬಂದ್ ಗೆ ಕರೆ ನೀಡಿವೆ. ಫೆ.16ರಂದು ಬೆಳಗ್ಗೆ 6ರಿಂದ ಸಂಜೆ 4ಗಂಟೆಯವರೆಗೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಂದ್ ಆಚರಿಸಲು ರೈತ ಸಂಘಟನೆಗಳು ನಿರ್ಧರಿಸಿದ್ದು, ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ದೇಶದ ಪ್ರಮುಖ ರಸ್ತೆಗಳಲ್ಲಿ ರೈತರು ವ್ಯಾಪಕ ಪ್ರತಿಭಟನೆ ನಡೆಸಲಿದ್ದಾರೆ.

    ಭಾರತ್ ಬಂದ್‌ನಲ್ಲಿ, ಸಾರಿಗೆ, ಕೃಷಿ ಚಟುವಟಿಕೆಗಳು, ನರೇಗಾ ಗ್ರಾಮೀಣ ಕೆಲಸಗಳು, ಖಾಸಗಿ ಕಚೇರಿಗಳು, ಹಳ್ಳಿ ಅಂಗಡಿಗಳು ಮತ್ತು ಗ್ರಾಮೀಣ ಕೈಗಾರಿಕಾ ಮತ್ತು ಸೇವಾ ವಲಯದ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಇದಲ್ಲದೆ, ಮುಷ್ಕರದ ಸಮಯದಲ್ಲಿ ಆಂಬ್ಯುಲೆನ್ಸ್‌ ಗಳ ಕಾರ್ಯಾಚರಣೆ, ಪತ್ರಿಕೆ ವಿತರಣೆ, ಮದುವೆ, ಮೆಡಿಕಲ್ ಶಾಪ್‌ ಗಳು, ಬೋರ್ಡ್ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಇತ್ಯಾದಿ ತುರ್ತು ಸೇವೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    LEAVE A REPLY

    Please enter your comment!
    Please enter your name here