ಮಂಗಳೂರು(ಬ್ರಹ್ಮಾವರ): ಬ್ರಹ್ಮಾವರ ಸಮೀಪದ ಆರೂರಿನ ಫಾರ್ಮೊಂದರಿಂದ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಹತ್ತಾರು ಕಿ.ಮೀ. ಓಡಿದ 3 ಕುದುರೆಗಳನ್ನು ಕೊನೆಗೂ ಗುಂಡ್ಮಿ ಟೋಲ್‌ಗೇಟ್ ಬಳಿ ಹಿಡಿದು ಫಾರ್ಮ್ ನ ಮಾಲೀಕರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಫಾರ್ಮ್ ನಿಂದ 5 ಕುದುರೆಗಳು ಭಾನುವಾರ ತಪ್ಪಿಸಿಕೊಂಡಿದ್ದು, 2 ಕುದುರೆಗಳು ಸಿಕ್ಕಿದ್ದವು. ಉಳಿದವು ಕುಂದಾಪುರದ ಕಡೆ ಓಡುತ್ತಿದ್ದವು. ಬ್ರಹ್ಮಾವರ ಭಾಗದವರು ಇವುಗಳ ಓಟದ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಕುದುರೆಗಳು ಗುಂಡ್ಮಿ ತಲುಪುತ್ತಿದ್ದಂತೆ ಸ್ಥಳೀಯರ ಸಹಕಾರದೊಂದಿಗೆ ಕುದುರೆಗಳನ್ನು ತಡೆದು ನಿಲ್ಲಿಸಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಫಾರ್ಮ್ ಕೆಲಸಗಾರರು ಕುದುರೆಯನ್ನು ಕರೆದೊಯ್ದಿದ್ದಾರೆ. ಈ ಕುದುರೆಗಳು ರೇಸ್‌ಗೆ ಬಳಸುವ ಕುದುರೆಗಳು ಎನ್ನಲಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ: