ಮಂಗಳೂರು: ಮಂಗಳೂರಿನ ಕದ್ರಿ ಕೈಬಟ್ಟಲಿನ ಪ್ರಕೃತಿ ಯೋಗ ಕುಟೀರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಂಗಳೂರು ಮಹಾನಗರಪಾಲಿಕೆಯ ಸದಸ್ಯ ಮನೋಹರ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯೋಗಾಸನದಿಂದ ಅದ್ಭುತ ಶಕ್ತಿ ಉಂಟಾಗುತ್ತದೆ. ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿದ ಎಜೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಶಾಂತ್ ಮಾರ್ಲ ಯೋಗ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಯೋಗ ಕುಟೀರದ ಸ್ಥಾಪಕರು, ಯೋಗ ಗುರು ರಾಧಾಕೃಷ್ಣ ಶೆಟ್ಟಿ ಯೋಗಾಭ್ಯಾಸವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಸೋಮಶೇಖರ್ ಶೆಟ್ಟಿ, ಮುಸ್ತಫಾ, ಶವಾಝ್, ಯೋಗ ಕುಟೀರದ ಸದಸ್ಯರು ಭಾಗವಹಿಸಿದ್ದರು.