ಕುಶಾಲನಗರ ಪಟ್ಟಣದಲ್ಲಿ ಉದ್ಯಮಿ ಮೇಲೆ ಗುಂಡಿನ ದಾಳಿ – ಆರೋಪಿ ಬಂಧನ

ಮಂಗಳೂರು/ಮಡಿಕೇರಿ: ಹಾಸನದಲ್ಲಿ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಓರ್ವನನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯ ನೆನಪು ಮಾಸುವ ಮುನ್ನವೇ ಇದೀಗ ಕೊಡಗು ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿದೆ. ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣದಲ್ಲಿ ಸೋಮವಾರ ಉದ್ಯಮಿ ಶಶಿಧರ್​ ಎಂಬುವರ ಮೇಲೆ 8 ಸುತ್ತು ಗುಂಡಿ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಶಶಿಕುಮಾರ್ ಕಾಲಿಗೆ ಗಂಭೀರ ಗಾಯವಾಗಿದೆ. ಅನುದೀಪ್ ಎಂಬಾತನಿಂದ ದಾಳಿ ನಡೆದಿದೆ.

ಕ್ಷುಲ್ಲಕ‌ ಕಾರಣಕ್ಕೆ ಅನುದೀಪ್ ಪಿಸ್ತೂಲ್​ನಿಂದ ಉದ್ಯಮಿಯ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಶಶಿಧರ್​ ತಮ್ಮ ಫಾರ್ಚೂನರ್ ಕಾರಿನಲ್ಲಿದ್ದಾಗ ಆರೋಪಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. 8 ಗುಂಡುಗಳು ಕಾರನ್ನು ಹೊಕ್ಕಿದ್ದು, ಶಶಿಧರ್ ಅವರ ಕಾಲಿಗೂ ಗುಂಡು ಹೊಕ್ಕಿದೆ. ಸದ್ಯ ಆರೋಪಿಯನ್ನು ಕುಶಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here