ಮಂಗಳೂರು/ನವದೆಹಲಿ: ಯುವಕನೋರ್ವ ಸೆಲೂನ್ ನಲ್ಲಿ ಹೊಸ ಶೈಲಿಯ ಫೈರ್ ಕಟ್ ಹೆರ್ ಸ್ಟೈಲ್ ಮಾಡಲು ಹೋದ ವೇಳೆ ತಲೆಗೆ ಬೆಂಕಿ ಹತ್ತಿಕೊಂಡು ಸ್ವಲ್ಪದರಲ್ಲಿ ಅಪಾಯದಿಂದ ಪಾರಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಯುವಕ ಕೂದಲು ಕತ್ತರಿಸಲು ಸೆಲೂನ್ ಗೆ ಹೋಗುತ್ತಾನೆ. ಅಲ್ಲಿ ಕ್ಷೌರಿಕ ಕೂದಲಿಗೆ ಜೆಲ್ ಹಾಕುತ್ತಾನೆ ನಂತರ ಕಡ್ಡಿಗೀರಿ ಆತನ ಕೂದಲಿಗೆ ಬೆಂಕಿ ಹಿಡಿಯುತ್ತಾನೆ. ಈ ವೇಳೆ ಏಕಾಏಕಿ ಯುವಕನ ತಲೆಗೆ ಬೆಂಕಿ ಹತ್ತಿಕೊಳ್ಳುತ್ತದೆ. ಕ್ಷಣಮಾತ್ರದಲ್ಲಿ ಯುವಕನ ಕುತ್ತಿಗೆಯವರೆಗೂ ಬೆಂಕಿ ವ್ಯಾಪಿಸುತ್ತದೆ. ಬೆಂಕಿಯ ಜ್ವಾಲೆ ಕಂಡು ಯುವಕ ಬೆಚ್ಚಿ ಬಿದ್ದಿದ್ದು, ಕುರ್ಚಿಯಿಂದ ಎದ್ದು ಓಡಲು ಮುಂದಾಗುತ್ತಾನೆ. ಈ ವೇಳೆ ಕ್ಷೌರಿಕ ತನ್ನ ಕೈಯಲ್ಲಿದ್ದ ಟವಲ್ ಮೂಲಕ ಬೆಂಕಿ ನಂದಿಸುತ್ತಾನೆ. ಆತನಿಗೆ ಆತನ ಸಹೋದ್ಯೋಗಿ ಸಹಾಯ ಮಾಡುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೂದಲನ್ನು ವಿಭಿನ್ನ ಶೈಲಿಯಲ್ಲಿ ಕತ್ತರಿಸಿ ತಾವು ಭಿನ್ನವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಆದ್ರೆ, ಅಪಾಯ ತಂದೊಡ್ಡುವ ರೀತಿಯಲ್ಲಿ ಕೂದಲು ಕತ್ತರಿಸಬೇಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Aur karwale fire cutting.!! 🔥 pic.twitter.com/oIbTqcnr0E
— Vijay (@veejuparmar) June 18, 2024