ಭ್ರಷ್ಟ ಅಧಿಕಾರಿಗಳಿಗೆ ಶಾಕ್ – ಬೆಳ್ಳಂಬೆಳಗ್ಗೆ ರಾಜ್ಯದ 54 ಕಡೆಗಳಲ್ಲಿ ಲೋಕಾಯುಕ್ತ ರೇಡ್ 

ಮಂಗಳೂರು/ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 54 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ ನೀಡಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶಿವಮೊಗ್ಗ, ಯಾದಗಿರಿ ಹಾಗೂ ತುಮಕೂರಿನಲ್ಲಿ ನೂರಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ಏಕ ಕಾಲಕ್ಕೆ ದಾಳಿ ಮಾಡಿದೆ. ಒಟ್ಟು 54 ಕಡೆಗಳಲ್ಲಿ ಈ ದಾಳಿ ನಡೆಯುತ್ತಿದ್ದು ಭ್ರಷ್ಟಾಚಾರ ನಡೆಸಿದಂತಹ ಅಧಿಕಾರಿಗಳ ಮನೆಯಲ್ಲಿ ದಾಖಲೆ, ಹಣ, ಆಸ್ತಿ-ಪಾಸ್ತಿಗಳ ವಿವರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಬೆಂಗಳೂರು ನಗರದ ಕೆ.ಐ.ಎ.ಡಿ.ಬಿ ಅಧಿಕಾರಿ ಬಿ.ವಿ ರಾಜ, ಕಮರ್ಷಿಯಲ್ ಟ್ಯಾಕ್ಸ್ ಜಂಟಿ ಆಯುಕ್ತ ರಮೇಶ್ ಕುಮಾರ್‌, ಲೀಗಲ್ ಮೆಟ್ರೊಲಜಿ ಡಿಪಾರ್ಟ್​​ಮೆಂಟ್ ನ ಡೆಪ್ಯೂಟಿ ಕಂಟ್ರೋಲರ್ ಅಥರ್ ಅಲಿ, ಮಂಡ್ಯ ವಿಭಾಗದ ಕಾರ್ಮಿಕ ಇಲಾಖೆ ಅಧಿಕಾರಿ ಚೇತನ್ ಕುಮಾರ್, ಬೆಂಗಳೂರು ಉತ್ತರ ಸಬ್ ಡಿವಿಜನ್ ಕಚೇರಿ ಅಧಿಕಾರಿ ಮಂಜುನಾಥ್ ಟಿ.ಆರ್, ದೊಡ್ಡಬಳ್ಳಾಪುರ ದೊಡ್ಡಬೆಳವಂಗಲ ಹೋಬಳಿ ಸೀನಿಯರ್ ವೆಟರ್ನರಿ ಆಫೀಸರ್ ಆರ್.ಸಿದ್ದಪ್ಪ, ಹೆಬ್ಬಗೋಡಿ ಮುನ್ಸಿಪಲ್ ಕಮಿಷನರ್ ಕೆ.ನರಸಿಂಹಮೂರ್ತಿ, ತುಮಕೂರಿನ ಇಂಡಸ್ಟ್ರಿ & ಕಮರ್ಷಿಯಲ್ ಡಿಪಾರ್ಟ್​​ಮೆಂಟ್ ನ ಅಡಿಷನಲ್ ಡೈರೆಕ್ಟರ್ ಸಿ.ಟಿ ಮುತ್ತುಕುಮಾರ್, ಯಾದಗಿರಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಲವಂತ್ ರಾಥೋಡ್, ಭದ್ರಾವತಿ ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಬಿ.ಎಸ್, ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರಕಾಶ್, ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಆನಂದ್ ಕಚೇರಿ ಮತ್ತು ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here