ಆಂಜನೇಯನ ಮುಂದೆ ಬಿಕಿನಿ ತೊಟ್ಟು ಪೋಸ್‌ – ವ್ಯಾಪಕ ಆಕ್ರೋಶ

ಮದ್ಯ ಪ್ರದೇಶ: ಬಿಜೆಪಿ ನಾಯಕರ ಸಮ್ಮುಖದಲ್ಲಿ ಮಹಿಳಾ ಕುಸ್ತಿ ಪಟುಗಳು ಬಿಕಿನಿ ತೊಟ್ಟು ನಗ್ನರಾಗಿ ರಾಮ ಭಕ್ತ, ಪವನ ಪುತ್ರ  ಆಂಜನೇಯನ ಮುಂದೆ ಪೋಸ್‌ ಕೊಟ್ಟಿದ್ದು, ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ದ ಮುಗಿ ಬಿದ್ದಿದೆ. 

ಮದ್ಯ ಪ್ರದೇಶದ ರತ್ಲಾಮ್‌ ನಲ್ಲಿ 13ನೇ ರಾಜ್ಯ ಮಟ್ಟದ ಮಿ.ಜ್ಯೂನಿಯರ್ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗಿತ್ತು.ಬಿಜೆಪಿ ಮೇಯರ್‌ ಪ್ರಹ್ಲಾದ್‌ ಪಟೇಲ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಣ ಸಚಿವ ಮೋಹನ್‌ ಯಾದವ್‌ ಭಾಗವಹಿಸಿದ್ದರು. ಈ ವೇಳೆ ಬಿಕಿನಿ ತೊಟ್ಟ ಮಹಿಳೆಯರು ಹನುಮಾನ್‌ ಮುಂದೆ ವಿವಿಧ ಪೋಸ್‌ ನೀಡಿದ್ದಾರೆ. ಬ್ರಹ್ಮಚರ್ಯೆ ಪಾಲಿಸುವ  ಆಂಜನೇಯನ ಮುಂದೆ ಹೀಗೆ ನಗ್ನವಾಗಿ ಪೋಸ್‌ ಕೊಟ್ಟಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದ್ದು, ಹೇಳೊದೊಂದು ಮಾಡೋದೊಂದು ಎಂದು ಕಿಡಿ ಕಾರಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ
?

LEAVE A REPLY

Please enter your comment!
Please enter your name here