ಶಿವಮೊಗ್ಗ: ಮಂಗಳೂರಿನ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ನನ್ನು ಎನ್ ಐ ಎ ತಂಡವು ಮಾ.7ರಂದು ಶಿವಮೊಗ್ಗಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದೆ. ಇದೇ ವೇಳೆ ಶಿವಮೊಗ್ಗದ ಪ್ರೇಮಚಂದ್ ಚಾಕು ಇರಿತ ಪ್ರಕರಣದ ಬಂಧಿತ ಆರೋಪಿ ಜಬೀವುಲ್ಲಾನನ್ನೂ ಎನ್ ಐ ಎ ತಂಡ ಕರೆತಂದಿದ್ದು, ಸ್ಥಳ ಮಹಜರು ನಡೆಸಿದೆ.
ಇವರಿಬ್ಬರು ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ ಪ್ರಕರಣದ ಆರೋಪಿಗಳಾಗಿದ್ದಾರೆ. ಶಿವಮೊಗ್ಗ ಸರಕಾರಿ ಬಸ್ ನಿಲ್ದಾಣ ಮತ್ತು ಬ್ರೈಟ್ ಹೊಟೇಲ್ ಬಳಿ ಕರೆದೊಯ್ದು ಮಹಜರು ನಡೆಸಲಾಗಿದೆ.